ಡೈಲಿ ವಾರ್ತೆ: 21/ಆಗಸ್ಟ್/ 2025

ಮಹೇಶ್‌ ಶೆಟ್ಟಿ ತಿಮರೋಡಿ ವಿಚಾರಣೆ: ಬ್ರಹ್ಮಾವರ ಪೊಲೀಸ್‌ ಠಾಣೆ ಹಾಗೂ ಸುತ್ತಮುತ್ತ ಬಿಗು ಪೊಲೀಸ್ ಭದ್ರತೆ

ಬ್ರಹ್ಮಾವರ: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಡುಪಿ ಪೊಲೀಸರು ತಿಮ್ಮರೋಡಿ ಮನೆಗೆ ಹೋಗಿ ಅಲ್ಲಿಂದ ಕರೆದುಕೊಂಡು ಬರುವ ಹಿನ್ನೆಲೆ ಬ್ರಹ್ಮಾವರ ಪೊಲೀಸ್ ಠಾಣೆಯ ಸುತ್ತಮುತ್ತ ಭದ್ರತೆಯನ್ನು ಮಾಡಿದ್ದಾರೆ.

ಇನ್ನೂ ವಿನಾಕಾರಣ ಪೊಲೀಸ್ ಠಾಣೆಗೆ ಬರುವಂತಿಲ್ಲ. ಪೊಲೀಸ್‌ ಠಾಣೆಯ ಸುತ್ತಮುತ್ತ ಯಾವುದೇ ವಾಹನ ನಿಲುಗಡೆಗೆ ಅವಕಾಶ ಇಲ್ಲ. ಇನ್ನು ಪೊಲೀಸ್‌ ಠಾಣೆಯ ರಸ್ತೆಯಲ್ಲಿ ಹಾದು ಹೋಗುವ ಗಾಡಿಗಳನ್ನು ವಿಚಾರಣೆ ಮಾಡಿ ಕಳುಹಿಸುತ್ತಿದ್ದಾರೆ. ಶೀಘ್ರದಲ್ಲಿ ಮಹೇಶ್‌ ಶೆಟ್ಟಿ ತಿರೋಡಿ ಬ್ರಹ್ಮಾವರ ಪೊಲೀಸ್‌ ಠಾಣೆಗೆ ಬರಲಿದ್ದಾರೆ.