


ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ( ರಿ) ಪಂಪಾ ಕ್ಷೇತ್ರ ಕಟಪಾಡಿ ಇದರ ಅಮೃತ ಶಿಲಾಮಯ ನವೀಕ್ರೃತ ದೇವಸ್ಥಾನದ ಒಮನ್ ಮಸ್ಕತ್ ಕಾರ್ಯಕಾರಿ ಸಮಿತಿವತಿಯಿಂದ ಪಾದಾರ್ಪಣೆ
ಕಟಪಾಡಿ: ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ( ರಿ) ಪಂಪಾ ಕ್ಷೇತ್ರ ಕಟಪಾಡಿ. ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂಪೂರ್ಣ ಅಮ್ರತ ಶಿಲಾಮಯ ನವೀಕ್ರೃತ ದೇವಸ್ಥಾನದ ಒಮನ್ ಮಸ್ಕತ್ ಕಾರ್ಯಕಾರಿ ಸಮಿತಿಯು ದಿನಾಂಕ,16/08/2025ನೇ ಶನಿವಾರ ಪಾದಾರ್ಪಣೆಗೊಂಡಿತು.



ಗೌರವಾಧ್ಯಾಕ್ಷಾರಾಗಿ, ಶಶಿಧರ್ ಶೆಟ್ಟಿ ಮಲ್ಲಾರು ಕಾಪು ಹಾಗೂ ಅಧ್ಯಕ್ಷರಾಗಿ ಶಿವಾನಂದ ಕೋಟ್ಯಾನ್ ಕಟಪಾಡಿ, ಕಾರ್ಯದರ್ಶಿಯಾಗಿ ರಾಜೇಶ್ ಮಟ್ಟು. ಇವರು ಆಯ್ಕೆಯಾಗಿರುತ್ತಾರೆ.
ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ರಿ.ಕಟಪಾಡಿ ಇದರ ಒಮನ್ ಮಸ್ಕತ್ ಸಮಿತಿಯ ಪದಗ್ರಹಣ ಕಾರ್ಯಕ್ರಮ, ಶ್ರೀ ಅಯ್ಯಪ್ಪ ದೇವರ ಕೃಪಾನಿಧಿ ಪೂಜೆ,ಭಜನೆ ಹಾಗೂ ಅನ್ನದಾನದ ಕಾರ್ಯಕ್ರಮವು ಗೌರವಾಧ್ಯಕ್ಷರಾದ ಶಶಿಧರ್ ಶೆಟ್ಟಿ ಹಾಗೂ ಅಧ್ಯಕ್ಷರಾದ ಶಿವಾನಂದ ಕೋಟ್ಯಾನ್ ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.

ಈ ಕಾರ್ಯಕ್ರಮದಲ್ಲಿ ಒಮನ್ ಮಸ್ಕತ್ ನಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ನಮ್ಮ ಊರಿನ ಹಾಗೂ ಪರವೂರಿನ ಸದ್ಭಕ್ತ ಭಾಂದವರು ಶ್ರೀ ಅಯ್ಯಪ್ಪ ದೇವರ ಪೂಜಾ ಕಾರ್ಯಕ್ರಮವನ್ನು ಕಣ್ತುಂಬಿ ಕೊಂಡು, ಅನ್ನದಾನದ ಹಾಗೂ ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು. ದೇವಾಲಯ ಕೇವಲ ಪ್ರಾರ್ಥನೆಯ ಆಲಯ ಅಗಿರದೆ, ಸಾಮಾಜಿಕ ಸ್ಪಂದನೆಯ ಕೇಂದ್ರವಾಗಿ ಇರುವುದು ಎಂಬುದನ್ನು ಕಟಪಾಡಿ ಸಾರ್ವಜನಿಕ ಅಯ್ಯಪ್ಪ ಭಕ್ತವೃಂದ ಮಾದರಿಯಾಗಿ ಗುರುತಿಸಿಕೊಂಡಿದೆ. ಪರ ಊರ ಪ್ರವಾಸಿಗರು ತಮ್ಮ ದೇಣಿಗೆಯನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಹಕಾರ ನೀಡುತ್ತಾರೆ. ಹೀಗೆ ನಮ್ಮ ಊರಿನಲ್ಲಿ ಈಗಾಗಲೇ ಕಾರ್ಣಿಕವಾಗಿ ಭಕ್ತರನ್ನು ಆಕರ್ಷಿಸುತ್ತಿರುವ ಕಟಪಾಡಿಯ ಮಂದಿರಕ್ಕೆ ನಮ್ಮ ಸ್ಪಂದನೆಯೂ ಇದೆ. ಸರ್ವರಿಗೂ ಶ್ರೀ ಅಯ್ಯಪ್ಪ ಕರುಣಿಸಲಿ ಎಂದು ಶ್ರೀ ಶಶಿಧರ ಶೆಟ್ಟಿಯವರು ತನ್ನ ಉದ್ಘಾಟನಾ ಮಾತನ್ನು ಆಡಿದರು. ಪುರೋಹಿತರಾದ ಶ್ರೀ ಗುರು ಭಟ್ ಅಯ್ಯಪ್ಪ ನಾಮಾವಳಿ ಹಾಡಿ ಪೂಜಾ ಕಾರ್ಯಕ್ರಮವನ್ನು ಚಂದಗಾಣಿಸಿದರು, ಕಾರ್ಯದರ್ಶಿಯಾದ ರಾಜೇಶ್ ಮಟ್ಟು ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿ, ಮಸ್ಕತ್ ಪರಿಸರದಲ್ಲಿ ಶ್ರೀ ಅಯ್ಯಪ್ಪ ಭಕ್ತರು ಒಂದೆಡೆ ಸೇರುವಲ್ಲಿ ಶ್ರಮಿಸಿದರು.