ಡೈಲಿ ವಾರ್ತೆ: 22/ಆಗಸ್ಟ್/ 2025

ಜಾತಿ ನಿಂದನೆ ಆರೋಪ: ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಬಂಧನ

ಬೆಂಗಳೂರು: ಜಾತಿ ನಿಂದನೆ ಪ್ರಕರಣದಲ್ಲಿ ವಕೀಲ ಜಗದೀಶ್ ಬೆಂಗಳೂರಲ್ಲಿ ಅರೆಸ್ಟ್ ಆಗಿದ್ದಾರೆ.

ಕೊಡಗೇಹಳ್ಳಿ ಪೊಲೀಸರು ವಕೀಲ ಜಗೀಶ್ ಬಂಧಿಸಿದ್ದಾರೆ. ಜಾತಿ ನಿಂದನೆ ಪ್ರಕರಣ ಸಂಬಂಧ ವಕೀಲ ಜಗದೀಶ್ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಬೆಂಗಳೂರು ಪೊಲೀಸರು ಆಗಸ್ಟ್ 21ರಂದು ಜಗದೀಶ್ ಮನೆಗೆ ತೆರಳಿ ಬರಿಗೈಯಲ್ಲಿ ವಾಪಾಸ್ಸಾಗಿದ್ದರು. ಮನೆ ಬಾಗಿಲು ತೆರೆಯದ ಸತಾಯಿಸಿದ್ದ ಜಗದೀಶ್ ಇಂದು ಅರೆಸ್ಟ್ ಆಗಿದ್ದಾರೆ.

ಮಂಜುನಾಥ್ ಅನ್ನೋ ವ್ಯಕ್ತಿ ನೀಡಿದ್ದ ದೂರಿನ ಆಧಾರದಲ್ಲಿ ಲಾಯರ್ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.