


ಡೈಲಿ ವಾರ್ತೆ: 26/ಆಗಸ್ಟ್/ 2025


ಕೇಸರಿ ಟವೆಲ್ ಹಾಕಿಕೊಂಡಿದ್ದಕ್ಕೆ ಯುವಕನ ಮೇಲೆ ಹಲ್ಲೆ – ಮೂವರ ಬಂಧನ

ಬೆಂಗಳೂರು: ಕೇಸರಿ ಟವೆಲ್ ಹಾಕಿಕೊಂಡಿದ್ದ ಸ್ವಿಂದರ್ ಕುಮಾರ್ ಎಂಬುವರ ಮೇಲೆ ಮೂವರು ಯುವಕರು ಹಲ್ಲೆ ಮಾಡಿದ ಘಟನೆ ಕಲಾಸಿಪಾಳ್ಯದಲ್ಲಿನ ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ನಡೆದಿದೆ.
ಹಲ್ಲೆ ಮಾಡಿದ ಆರೋಪಿಗಳಾದ ತಬ್ರೇಜ್, ಇಮ್ರಾನ್ ಖಾನ್, ಅಜೀಝ್ ಖಾನ್ ಎಂದು ತಿಳಿದು ಬಂದಿದೆ.
ಈ ಆರೋಪಿಗಳನ್ನು
ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ಆ.24 ರ ರಾತ್ರಿ 9:30ರ ಸುಮಾರಿಗೆ ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಿಂದರ್ ಕುಮಾರ್ ಮತ್ತು ಹರಿಕೃಷ್ಣ ಇವರ ಬಳಿಗೆ ಬಂದು ಸ್ವಿಂದರ್ ಕುಮಾರ್ ಅವರನ್ನು ನಿಲ್ಲಿಸಿಕೊಂಡು “ನೀನು ಯಾಕೆ ಕೇಸರಿ ಟಾವೆಲ್ ಹಾಕಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ತಳ್ಳಿದ್ದಾರೆ.
ಇದನ್ನು, ನೋಡಿದ ಹರಿಕೃಷ್ಣ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾರೆ. ಆಗ, ಆರೋಪಿಗಳು ಇಬ್ಬರಿಗೂ ಅವ್ಯಾಚ್ಯ ಶಬ್ದಗಳಿಂದ ಬೈದು ಹರಿಕೃಷ್ಣ ಅವರ ಶರ್ಟ್ ಅನ್ನು ಹರಿದು ಕೈಯಿಂದ ಹೊಡೆದಿದ್ದಾರೆ.
ಬಳಿಕ ಆರೋಪಿಗಳು “ನಿಮ್ಮ ಕೂಲಿ ಮಾಡುವ ಹುಡುಗ ಯಾಕೆ ಕೇಸರಿ ಟಾವೆಲ್ ಹಾಕಿದ್ದಾನೆ. ಅದನ್ನು ತಗಿಸಿ” ಎಂದು ಏರುದನಿಯಲ್ಲಿ ಹರಿಕೃಷ್ಣ ಅವರಿಗೆ ಹೇಳಿ ಅಲ್ಲಿಂದ ಹೋರಟು ಹೋಗಿದ್ದಾರೆ.
ಈ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ನಮ್ಮ ಜೊತೆ ಮತ್ತೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ನೀಡಬೆಕೇಂದು ಹಲ್ಲೆಗೊಳಗಾವರು ದೂರು ನೀಡಿದ್ದಾರೆ.