ಡೈಲಿ ವಾರ್ತೆ: 27/ಆಗಸ್ಟ್/ 2025

ಕೋಟ ಗಣೇಶೋತ್ಸವದ 50ನೇ ವರ್ಷದ ಸುವರ್ಣ ವಾರ್ಷಿಕೋತ್ಸವಕ್ಕೆ ಪರಿಸರ ಸ್ನೇಹಿಯಾಗಿ ಗಿಡವನ್ನು ವಿತರಿಸುವ ಮೂಲಕ ಸಮಿತಿಯ ಗೌರವಧ್ಯಕ್ಷ ಆನಂದ್ ಸಿ ಕುಂದರ್ ಅವರಿಂದ ಚಾಲನೆ

ಕೋಟ: ಕೋಟ ದೊಡ್ಡ ಗಣೇಶೋತ್ಸವದ 50ನೇ ವರ್ಷದ ಸುವರ್ಣ ವಾರ್ಷಿಕೋತ್ಸವದ ಸಂಭ್ರಮವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಸಲುವಾಗಿ ಗೀತಾನಂದ ಸಂಸ್ಥೆಯ ವತಿಯಿಂದ ಗಿಡಗಳ ವಿತರಣೆ ಮತ್ತು ಬಟ್ಟೆ ಚೀಲಗಳ ವಿತರಣೆಗೆ ಗೀತಾನಂದ ಸಂಸ್ಥೆಯ ಮುಖ್ಯಸ್ಥರು ಮತ್ತು ಗಣೇಶೋತ್ಸವ ಸಮಿತಿಯ ಗೌರವಧ್ಯಕ್ಷರಾದ ಆನಂದ ಸಿ ಕುಂದರ್ ಸ್ಥಳೀಯ ಹಿರಿಯರಾದ ಒಳಮಾಡು ಸೋಮ ಮಾರಕಲ ಅವರಿಗೆ ಗಿಡವನ್ನು ನೀಡುವುದರೊಂದಿಗೆ ಚಾಲನೆ ನೀಡಿದರು.