ಡೈಲಿ ವಾರ್ತೆ: 27/ಆಗಸ್ಟ್/ 2025

ರೋಟರಿ ಕೋಟ ಸಾಲಿಗ್ರಾಮ ವತಿಯಿಂದ ರೋಟರಿ ಸದಸ್ಯರ ಅಭಿವೃದ್ದಿ ಬಗ್ಗೆ ವಿಚಾರ ಗೋಷ್ಠಿ.

ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ವತಿಯಿಂದ “ಸದಸ್ಯತ್ವ ಅಭಿವೃದ್ಧಿ, ಸದಸ್ಸತ್ವ ಧಾರಣೆ ಮತ್ತು ಸಾರ್ವಜನಿಕ ಪ್ರತಿಬಿಂಬ” ಇದರ ಬಗ್ಗೆ ರೋಟರಿ ಜಿಲ್ಲೆ 3182 ರ ವಲಯ ಮಟ್ಟದ ಕಾರ್ಯಗಾರವು ದಿನಾಂಕ ಅಗೋಸ್ತ್ 24 ರ ಶನಿವಾರದಂದು ಕುಂಭಾಸಿಯ ಗಾಯತ್ರಿ ಕಂಪರ್ಟ್ಸ್ ನಲ್ಲಿ ನಡೆಯಿತು.

ಕಾರ್ಯಗಾರದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ದ ಅಧ್ಯಕ್ಷ ರೊ.ಯೋಗಿಶ್ ಕುಮಾರ್ ವಹಿಸಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ರೋಟರಿ ಜಿಲ್ಲೆ 3182 ರ ಸದಸ್ಯತ್ವ ಅಭಿವೃದ್ಧಿ ಸಭಾಪತಿ ರೊ. ಕೆ. ಬಿ ಪ್ರಸನ್ನ ಕೊಪ್ಪ ರವರು ಆರಂಭಿಸಿದರು, ರೋಟರಿ ವಲಯ 2 ರ ಅಸಿಸ್ಟೆಂಟ್ ಗವರ್ನರ್ ರೊ. ಶ್ಯಾಮ ಸುಂದರ ನಾಯರಿ ಯವರು ಶುಭಹಾರೈಸಿ ಕಾರ್ಯಕ್ರಮದ ಧೇಯ್ಯದ ಬಗ್ಗೆ ತಿಳಿಸಿದರು ಸಭೆಯಲ್ಲಿ ವಲಯ ಸೇನಾನಿಗಳಾದ ರವೀಂದ್ರ ಶೆಟ್ಟಿ, ಕೆ ಎಸ್ ವೈದ್ಯ, ವಿಜಯ ಕುಮಾರ್ ಶೆಟ್ಟಿ ಹಾಜರಿದ್ದು ರೊ. ರಾಜೇಂದ್ರ ಸುವರ್ಣ ಸ್ವಾಗತಿಸಿದರು.

ಸದಸ್ಯರ ಅಭಿವೃದ್ಧಿ ಮತ್ತು ಸದಸ್ಯರ ಧಾರಣೆ ಬಗ್ಗೆ ರೊ. ಕೃಷ್ಣ ಕಾಂಚನ್ ಮತ್ತು ರೋಟರಿ ಪಬ್ಲಿಕ್ ಇಮೇಜ್ ವಿಷಯದ ಕಾರ್ಯಗಾರವನ್ನು ರೊ. ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ ನಡೆಸಿಕೊಟ್ಟರು. ರೋಟರಿ ಕೋಟ ಸಾಲಿಗ್ರಾಮ ದ ಕಾರ್ಯದರ್ಶಿ ಶರಣಯ್ಯ ಹಿರೇಮಠ್, ಮಾಜಿ ಅಧ್ಯಕ್ಷರಾದ ತಿಮ್ಮ ಪೂಜಾರಿ ವಲಯ 2 ರ ಪ್ರಮುಖರಾದ ನಿತ್ಯಾನಂದ ನಾಯರಿ, ಸಂತೋಷ್ ದೇವಾಡಿಗ, ಸತೀಶ್ ಶೆಟ್ಟಿ, ಚಂದ್ರಶೇಖರ್ ಮೆಂಡನ್, ಹಾಗೂ ರೋಟರಿ ವಲಯ 2ರ ಸದಸ್ಯರು ಉಪಸ್ಥಿತರಿದ್ದರು.