


ಡೈಲಿ ವಾರ್ತೆ: 01/ಸೆ./2025


ಸ್ಟೆಲ್ಲಾಮಾರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ -ತಾಲ್ಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ,ಉಪ ನಿರ್ದೇಶಕರ ಕಛೇರಿ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಆಶ್ರಯದಲ್ಲಿ ಆಗಸ್ಟ್ 30ರಂದು ತಾಲ್ಲೂಕು ಮಟ್ಟದ14 ರ ವಯೋಮಾನದ ಬಾಲಕ -ಬಾಲಕಿಯರ ಥ್ರೋಬಾಲ್ ಪಂದ್ಯಾಟವನ್ನು ಆಯೋಜಿಸಲಾಯಿತು.
ಮೊದಲಿಗೆ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಕಾರ್ಯದರ್ಶಿ ಧರ್ಮಭಗಿನಿ ವಂದನೀಯ ಕ್ರೆಸೆನ್ಸ್ ಅವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ನಂತರ ಗಣ್ಯರೆಲ್ಲರು ವೇದಿಕೆಯ ಮೇಲೆ ಅಲಂಕರಿಸಿದ್ದ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಗೌರವ ನಮನವನ್ನು ಸಲ್ಲಿಸಿ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಯುತ.
ಸತ್ಯನಾರಾಯಣ ಜಿ. ತರಬೇತಿ ಮತ್ತು ನಿಯೋಜನಾಧಿಕಾರಿಗಳು ಪ್ರಾಸ್ತಾವಿಕ ಮಾತುಗಳನ್ನಾಡಿ ಕ್ರೀಡೆಯಲ್ಲಿ ಪ್ರತಿಯೊಬ್ಬ ಕ್ರೀಡಾಪಟು ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದರು.
ನಂತರ ಮತ್ತೊವ೯ ಮುಖ್ಯ ಅತಿಥಿಗಳಾದ ಗಂಗೊಳ್ಳಿ ಚರ್ಚಿನ ಧರ್ಮ ಗುರುಗಳು ವಂದನೀಯ ಥಾಮಸ್ ರೋಷನ್ ಡಿಸೋಜರವರು ಮಾತನಾಡಿ ಆಟವನ್ನು ಹುಮ್ಮಸ್ಸಿನಿಂದ ಆಡಿದರೆ ಜಯವೂ ನಮ್ಮ ಪಾಲಿನದಾಗಿರುತ್ತದೆ ಎಂಬ ಸಂದೇಶವನ್ನು ನೀಡಿದರು.
ಇನ್ನೊರ್ವ ಮುಖ್ಯ ಅತಿಥಿಗಳಾದ ಶ್ರೀಮತಿ ಜಯಂತಿ ಖಾವಿ೯ ಅಧ್ಯಕ್ಷರು ಗ್ರಾಮ ಪಂಚಾಯತ್ ಗಂಗೊಳ್ಳಿ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಈ ಪಂದ್ಯಾಟದಲ್ಲಿ ವಿವಿಧ ಶಾಲೆಗಳ ಬಾಲಕಿಯರ ಮತ್ತು ಬಾಲಕರ ತಂಡಗಳು ಉತ್ಸಾಹದಿಂದ ಭಾಗವಹಿಸಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀಯುತ ಪ್ರದೀಪ್ ಕುಮಾರ್ ಶೆಟ್ಟಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು ಕುಂದಾಪುರ, ಶ್ರೀಯುತ ಬಾಲಕೃಷ್ಣ ಶೆಟ್ಟಿ. ಅಧ್ಯಕ್ಷರು ದೈಹಿಕ ಶಿಕ್ಷಕ ಸಂಘ. ಶ್ರೀಯುತ ಕಿಶನ್ ರಾಜ್ ಶೆಟ್ಟಿ ,ಅಧ್ಯಕ್ಷರು, ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು , ಶ್ರೀಯುತ ಚಂದ್ರ ಶೇಖರ್ ಶೆಟ್ಟಿ ದೈಹಿಕ ಶಿಕ್ಷಣಾಧಿಕಾರಿಗಳು ಉಡುಪಿ ಜಿಲ್ಲೆ.
ಶ್ರೀಯುತ. ನಾಗರಾಜ್ ಖಾವಿ೯ ಉಪಾಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ. ಕಾರ್ಮೆಲ್ ಸಂಸ್ಥೆಯ ಮುಖ್ಯಸ್ಥೆ ಧರ್ಮಭಗಿನಿ ವಂದನೀಯ ಗ್ರೇಸಿ ಲೋಬೋ , ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಧರ್ಮಭಗಿನಿ ವಂದನೀಯ ವಿಜಯ ಕ್ರಾಸ್ತಾ ಇವರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರಾದ ಪ್ರಣಯ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಮುಖ್ಯ ಶಿಕ್ಷಕಿ ಧರ್ಮಭಗಿನಿ ವಂದನೀಯ ವಿಜಯ ಕ್ರಾಸ್ತಾ ಇವರು ಸ್ವಾಗತಿಸಿದರು. ಶಿಕ್ಷಕಿ ಅನಿತಾ .ಎ ಇವರು ವಂದಿಸಿದರು.ಶಿಕ್ಷಕಿ ಕು. ಮನಿಷಾ ನಿರೂಪಣೆ ಗೈದರು.