ಡೈಲಿ ವಾರ್ತೆ: 01/ಸೆ./2025

ಎಸ್.ಡಿ.ಪಿ.ಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ನಾಯಕರ ಸಭೆ – ಮುಖ್ಯ ಅತಿಥಿಗಳಾಗಿ ಇಲ್ಯಾಸ್ ತುಂಬೆ ಹಾಗೂ ರಿಯಾಝ್ ಫರಂಗೀಪೇಟೆ

ಎಸ್.ಡಿ.ಪಿ.ಐ ಮಂಗಳೂರು ( ಉಳ್ಳಾಲ ) ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ನಾಯಕರ ಸಭೆಯು ದಿನಾಂಕ 2/09/2025 ರ ಮಂಗಳವಾರದಂದು ತೊಕ್ಕೋಟು ಸಮೀಪದ ಕಲ್ಲಾಪು ಯುನಿಟಿ ಹಾಲ್ ನಲ್ಲಿ SDPI ಮಂಗಳೂರು ಕ್ಷೇತ್ರ ಅಧ್ಯಕ್ಷರಾದ ಝಾಹಿದ್ ಮಲಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಾಮಾಜಿಕ ನ್ಯಾಯ,ಸಮಾನತೆ ಮತ್ತು ಬದಲಾವಣೆಯ ಹಾದಿಯಲ್ಲಿ ಜನತೆಗೆ ಧೈರ್ಯ ತುಂಬುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಪಕ್ಷವು ಪಕ್ಷದ ನಾಯಕರುಗಳಿಗೆ ” ಬದಲಾವಣೆಗಾಗಿ ಕೊಡುಗೆ ” ( Contribution for Change ) ಎಂಬ ಧ್ಯೇಯ ವಾಕ್ಯದೊಂದಿಗೆ ನಾಯಕರ ಸಭೆ ನಡೆಸುತ್ತಿದ್ದು ಇದರ ಭಾಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ( ಉಳ್ಳಾಲ ) ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ನಡೆಯುವ ನಾಯಕರ ಸಭೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗೀಪೇಟೆ ಮತ್ತು ಜಿಲ್ಲಾಧ್ಯಕ್ಷರಾದ ಜಲೀಲ್ ಕೃಷ್ಣಾಪುರ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.