


ಡೈಲಿ ವಾರ್ತೆ: 03/ಸೆ./2025


ಸಾಲಿಗ್ರಾಮ| ಇಸ್ಪೀಟು ಅಡ್ಡೆಗೆ ಕೋಟ ಪೊಲೀಸರ ದಾಳಿ – 8 ಮಂದಿ ವಶಕ್ಕೆ

ಕೋಟ: ಬ್ರಹ್ಮಾವರ ತಾಲೂಕಿನ ಚಿತ್ರಪಾಡಿ ಗ್ರಾಮದ ಸಾಲಿಗ್ರಾಮದಲ್ಲಿರುವ ಗುರುನರಸಿಂಹ ದೇವಸ್ಥಾನದ ಕೆರೆಯ ಹತ್ತಿರ ಇರುವ ಮನೆಯ ಬಳಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಟ ಠಾಣಾ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಅವರು ಸಿಬ್ಬಂದಿಗಳೊಂದಿಗೆ ಸೆ.2 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ದಾಳಿ ನಡೆಸಿ ಇಸ್ಪೀಟು ಆಡುತ್ತಿದ್ದ ಸ್ಥಳೀಯರಾದ ಸತೀಶ, ರಘು ಸಾಲಿಗ್ರಾಮ, ಚೇತನ ಕಾರ್ಕಡ, ಹರೀಶ, ಜನಾರ್ಧನ ಬಾರ್ಕೂರು, ಸನ್ನಿಧಾನ, ಪ್ರಸಾದ ಹಾಗೂ ನವೀನ ಈ 8 ಮಂದಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಇಸ್ಪೀಟು ಆಟಕ್ಕೆ ಬಳಸಿದ ಎಲೆ ಗಳನ್ನು , ನಗದು 14,130/-, ಬೆಡ್ ಶಿಟ್ -1, ಮೊಬೈಲ್ -7 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 157/2025 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.