ಡೈಲಿ ವಾರ್ತೆ: 04/ಸೆ./2025

ಅಮಾಸೆಬೈಲುನಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ, ಧರ್ಮ ರಕ್ಷಕನಿಂದ ಯುವತಿಯ ಮಾನಭಂಗಕ್ಕೆ ಯತ್ನ.? – ಇಂಥವರಿಂದ ಧರ್ಮ ರಕ್ಷಣೆ ಸಾಧ್ಯವೇ? – ಕೋಟ ನಾಗೇಂದ್ರ ಪುತ್ರನ್ ಆಕ್ರೋಶ

ಕುಂದಾಪುರ: ಅಮಾಸೆಬೈಲುನ ರಟ್ಟಾಡಿ ವ್ಯಾಪ್ತಿಯಲ್ಲೊಬ್ಬ ಕಾಮ ಕಿಚಕ. ಧರ್ಮ ರಕ್ಷಣೆ ಕರೆಯೋಲೆ ಕೊಡೋಕೆ ಬಂದ ಸಂಘದ ಸದಸ್ಯೆಯನ್ನೇ ಬಲತ್ಕರಿಸಲು ಮುಂದಾದ ಘಟನೆ ಅಮಾಸೆಬೈಲುನಲ್ಲಿ ನಡೆದ ಬಗ್ಗೆ ತಿಳಿದು ಬಂದಿದೆ.

ಹೆಣ್ಣಿನ ಅತ್ಯಾಚಾರ ಮತ್ತು ಕೊಲೆ ವಿಷಯವಾಗಿ ಧರ್ಮಸ್ಥಳದಲ್ಲಿ ಪರ ವಿರೋಧದ ಬಹು ದೊಡ್ಡ ಆಂದೋಲನ ನಡೆಯುತ್ತಿದೆ. ಇದೇ ವಿಷಯವಾಗಿ ಧರ್ಮ ಸಂರಕ್ಷಣ ಯಾತ್ರೆ ಮೊನ್ನೆಯ ದಿನ ನಡೆದಿದೆ. ಈ ಬಗ್ಗೆ ಅಮಾಸೆಬೈಲ್ ವ್ಯಾಪ್ತಿಯ ಸಂಘದ ಸದಸ್ಯೆಯೋಬ್ಬರು ಮಾಜೀ ತಾಲೂಕು ಪಂಚಾಯತ್ ಸದಸ್ಯ ಹಾಗೂ ಜನ ಜಾಗೃತಿ ಉಡುಪಿ ಮಾಜಿ ಜಿಲ್ಲಾಧ್ಯಕ್ಷ, ಸ್ಥಳೀಯ ರಾಜಕೀಯ ಪುಡಾರಿಯೊಬ್ಬನಿಗೆ ಕರೆಯೋಲೆ ನೀಡಲು ಒಬ್ಬಂಟಿಯಾಗಿ ತೆರಳಿದ್ದರು. ಅದೇ ಸಂದರ್ಭದಲ್ಲಿ ಆತನ ಮನೆಯಲ್ಲಿ ಯಾರು ಇಲ್ಲದ ಕಾರಣ ಈಕೆಯನ್ನು ಸಲುಗೆಯಿಂದ ಮಾತನಾಡಿಸಲಾರಂಬಿಸಿದ. ಕ್ರಮೇಣ ಈತನ ವರ್ತನೆ ನೋಡಿ ಬೆದರಿದ ಹುಡುಗಿ ಅಲ್ಲಿಂದ ತೆರಳಲು ರೆಡಿಯಾದಳು. ಇದನ್ನರಿತ ಈತ ಆಕೆಯನ್ನು ಬಲವಂತವಾಗಿ ಎಳೆದಾಡಿದ್ದಾನೆ. ಕೂಡಲೇ ಆಕೆ ಕೂಗಿಕೊಂಡಾಗ ವಿಚಲಿತನಾಗಿ ಆಕೆಯನ್ನು ಬಿಟ್ಟು ಕಳಿಸಿದ್ದಾನೆ. ಈ ಸುದ್ದಿ ಅಲ್ಲಲ್ಲಿ ಗುಸು ಗುಸು ಅಂತ ಸುದ್ದಿಯಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮಟ್ಟಕ್ಕೆ ಹೋಗಿದೆ. ಇದೀಗ ಪಕ್ಷದ ನಾಯಕರು ಯುವತಿಯ ಮನವೊಲಿಸಿ ಪ್ರಕರಣ ದಾಖಲಿಸದಂತೆ
ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇಂಥವರಿಂದ ಧರ್ಮ ರಕ್ಷಣೆ ಸಾಧ್ಯವೇ? ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.