ಡೈಲಿ ವಾರ್ತೆ: 14/ಸೆ./2025

ಪಾನಿಪೂರಿ ತಿನ್ನುವ ವೇಳೆ ಗಲಾಟೆ – ಒಂದೇ ಪಂಚ್‌ಗೆ ಹಾರಿ ಹೋಯ್ತು ಯುವಕನ ಪ್ರಾಣ!

ಬೆಂಗಳೂರು: ಪಾನಿಪೂರಿ ತಿನ್ನೋಕೆ ಹೋದ ವೇಳೆ ಯುವಕರ ನಡುವೆ ಗಲಾಟೆ ನಡೆದು ಒಂದೇ ಪಂಚ್‌ಗೆ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯ ಬಳಿಯ ಅರಕೆರೆಯಲ್ಲಿ ನಡೆದಿದೆ.

ಬಿಹಾರದ ಮೂಲದ ಭೀಮಕುಮಾರ್ (25) ಮೃತ ದುರ್ದೈವಿ.
ಸ್ನೇಹಿತರೊಂದಿಗೆ ಪಾನಿಪೂರಿ ತಿನ್ನಲು ಹೋದ ವೇಳೆ ಭೀಮಕುಮಾರ್ ಮತ್ತು ಸಲ್ಮಾನ್ ನಡುವೆ ಗಲಾಟೆ ಆಗಿತ್ತು. ಭೀಮಕುಮಾರ್‌ನ ಕತ್ತಿನ ಭಾಗಕ್ಕೆ ಸಲ್ಮಾನ್ ಬಲವಾಗಿ ಒಂದು ಪಂಚ್ ಕೊಟ್ಟಿದ್ದ. ಪರಿಣಾಮ ಭೀಮಕುಮಾರ್ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದ.

ಬಳಿಕ ಜೊತೆಗಿದ್ದ ಯುವಕರು, ಭೀಮಕುಮಾರ್‌ನನ್ನ ಮನೆಗೆ ಕರೆದುಕೊಂಡು ಹೋಗಿ ಹಾರೈಕೆ ಮಾಡಿದ್ದರು. ಆದರೆ ಮೂರು ದಿನದ ಬಳಿ ಮನೆಯಲ್ಲೇ ಆತ ಸಾವನ್ನಪ್ಪಿದ್ದಾನೆ. ಈ ಘಟನಾ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.