


ಡೈಲಿ ವಾರ್ತೆ: 14/ಸೆ./2025


ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಬುರೂಜ್ ಶಾಲೆಗೆ 19 ಪದಕಗಳು

ಬಂಟ್ವಾಳ : ರಝಾನಗರದ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ವಿದ್ಯಾರ್ಥಿಗಳು ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ 22 ನೇ ರಾಜ್ಯ ಕರಾಟೆ ಚಾಂಪಿಯನ್ ಶಿಪ್ 2025 ರಲ್ಲಿ 6 ಚಿನ್ನದ ಪದಕ 6 ಬೆಳ್ಳಿಯ ಪದಕ ಹಾಗೂ 7 ಕಂಚಿನ ಪದಕ ಒಟ್ಟು 19 ಪದಕ ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾರೆ.
ಮುಹಮ್ಮದ್ ಹುಸೈನ್, ವೈಷ್ಣವ್ ಎಂ.ಬಂಜನ್, ರಾಬಿಯ ಹಯಾ ಫಾತಿಮ, ಮೊಹಮ್ಮದ್ ಸೈಫುದ್ದೀನ್, ಮೊಹಮ್ಮದ್ ಶಹಾನ್, ಮೊಹಮ್ಮದ್ ರಿಹಾನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದರೆ ವಿಕಾಸ್, ಧೃತಿ, ಮಾನ್ವಿ ಶೆಟ್ಟಿ, ಮೊಹಮ್ಮದ್ ಅರ್ಮನ್, ಅಬುಸುಬಾಹಾನ್, ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಗಳಿಸಿಕೊಂಡಿದ್ದಾರೆ. ಸ್ಪೂರ್ತಿ, ಮೊಹಮ್ಮದ್ ರಾಝಿಕ್, ಪ್ರಾಪ್ತಿ ಜೆ ಶೆಟ್ಟಿ, ಫಾತಿಮ ಫೈಹಾ, ವಂಶಿಕ್, ಅಬ್ದುಲ್ ಸಲಾಂ, ಅಬುಸುಬಾಹಾನ್ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ .
ಇವರಿಗೆ ಕರಾಟೆ ಪಟು ಮೊಹಮ್ಮದ್ ನದೀಂ, ಸರ್ಫಾಝ್, ಮೊಹಮ್ಮದ್ ರಾದಿನ್ ತರಬೇತಿ ನೀಡಿರುತ್ತಾರೆ.