ಡೈಲಿ ವಾರ್ತೆ: 22/ಸೆ./2025

ಇಂದಿನಿಂದ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ- ಮೊದಲು ಎಷ್ಟು? ಈಗ ಎಷ್ಟು ಇಳಿಕೆ?

ಬೆಂಗಳೂರು: ಕೆಎಂಎಫ್ ಗ್ರಾಹಕರಿಗೆ ಸಿಹಿ ಸುದ್ದಿ. ಜಿಎಸ್‌ಟಿ ಪರಿಷ್ಕರಣೆಯಾದ ಬೆನ್ನಲ್ಲೇ ಇಂದಿನಿಂದಲೇ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಿದೆ. ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು 12% ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5%ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ.

ಪನ್ನಿರ್ ಮತ್ತು ಯುಹೆಚ್‌ಟಿ ಹಾಲಿಗೆ(ಗುಡ್ ಲೈಫ್) ಮೊದಲು 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ದರ ಕಡಿಮೆಯಾಗಿದೆ.

ಹಾಲು, ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್‌ಟಿ ಇಲ್ಲ, ಮೊಸರಿಗೆ 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ಈ ಎರಡೂ ಉತ್ಪನ್ನಗಳ ಬೆಲೆ ಈಗಿನಂತೆ ಮುಂದುವರಿಯಲಿದೆ.

ಯಾವ್ಯಾವ ಉತ್ಪನ್ನಗಳ ದರ ಇಳಿಕೆ?
ತುಪ್ಪ- ( 1000- ಮಿ.ಲಿ)
650 – ಹಳೆ ದರ
610 – ಈಗಿನ ದರ

ಬೆಣ್ಣೆ- 500 ಗ್ರಾಂ
ಹಳೆ ದರ – 305
ಹೊಸ ದರ – 286
ಪನ್ನೀರ್ – 1000 ಗ್ರಾಂ
ಹಳೆ ದರ – 425
ಹೊಸ – 408
ಗುಡ್ ಲೈಫ್ ಹಾಲು
ಹಳೆ ದರ – 70
ಹೊಸ ದರ – 68
ಸಂಸ್ಕರಿಸಿದ ಚೀಸ್
ಹಳೆ ದರ – 530
ಹೊಸ ದರ – 497
ಐಸ್‌ಕ್ರೀಮ್ ಫ್ಯಾಮಿಲಿ ಪ್ಯಾಕ್
ಹಳೆ ದರ – 645
ಹೊಸ ದರ – 574
ಐಸ್‌ಕ್ರೀಮ್ ವೆನಿಲಾ ಟಬ್
ಹಳೆ ದರ – 200
ಹೊಸ ದರ – 178
ಐಸ್‌ಕ್ರೀಮ್ ಚಾಕಲೇಟ್ ಸಂಡೇ
ಹಳೆ ದರ – 115
ಹೊಸ ದರ – 102
ಐಸ್‌ಕ್ರೀಮ್ ಮ್ಯಾಂಗೋ ನ್ಯಾಚುರಲ್ಸ್
ಹಳೆ ದರ – 35
ಹೊಸ ದರ – 31

ಖಾರಾ ಉತ್ಪನ್ನಗಳು
ಹಳೆ ದರ – 60
ಹೊಸ ದರ – 56
ಮಫಿನ್‌ಗಳು
ಹಳೆ ದರ – 50
ಹೊಸ ದರ – 45
ನಂದಿನಿ ನೀರು (1000 ಮಿ.ಲೀ)
ಹಳೆ ದರ – 20
ಹೊಸ ದರ – 18
ಜಾಮೂನು ಮಿಶ್ರಣ
ಹಳೆ ದರ – 80
ಹೊಸ ದರ – 71
ಬಾದಾಮ್ ಹಾಲಿನ ಪುಡಿ – (200 ಗ್ರಾಂ)
ಹಳೆ ದರ – 120
ಹೊಸ ದರ – 107
ಕುಕೀಸ್ (100 ಗ್ರಾಂ)
ಹಳೆ ದರ – 35
ಹೊಸ ದರ – 31
ರೈಸ್ ಕ್ರಿಪಿ ಮಿಲ್ಕ್ ಚಾಕೋ (80 ಗ್ರಾಂ)
ಹಳೆ ದರ – 65
ಹೊಸ ದರ – 58
ಕೇಕ್‌ಗಳು (200 ಗ್ರಾಂ)
ಹಳೆ ದರ – 110
ಹೊಸ ದರ – 98