ಡೈಲಿ ವಾರ್ತೆ: 25/ಸೆ./2025

ಕರಾವಳಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ. ಎ. ಗಪೂರುಗೆ ವಕ್ಫ್ ಸಲಹಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಮುತ್ತಾಲಿ ವಂಡ್ಸೆ ಅವರಿಂದ ಅಭಿನಂದನೆ

ಉಡುಪಿ: ಕರಾವಳಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ. ಎ. ಗಪೂರು ಅವರಿಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸಿ. ಎಚ್. ಅಬ್ದುಲ್ ಮುತ್ತಾಲಿ ಅವರು ಅಭಿನಂದಿಸಿದ್ದಾರೆ.

ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು
ಎಂ.ಎ. ಗಪೂರ್ ಅವರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ದೊರೆತಿದ್ದು ನನಗೆ ತುಂಬಾ ಖುಷಿ ತಂದಿದೆ.
ಕಾಂಗ್ರೆಸಿನ ಓರ್ವ ನಿಷ್ಠಾವಂತ ಕಾರ್ಯಕರ್ತರಾದ ಗಫೂರ್ ಅವರು ಆಸ್ಕರ್ ಫರ್ನಾಂಡಿಸ್ ರವರ ನಿಕಟವರ್ತಿ ಯಾಗಿದ್ದವರು.
ಹಳ್ಳಿಯಿಂದ ದಿಲ್ಲಿವರೆಗೆ ಎಲ್ಲಾ ಕಾಂಗ್ರೆಸ್ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದವರಗಿದ್ದು ಪಕ್ಷದ ಕೆಲಸವನ್ನು ನಿಷ್ಠೆ ಪ್ರಾಮಾಣಿಕವಾಗಿ ಮಾಡಿದವರಗಿದ್ದಾರೆ. ಎಲ್ಲರ ಜೊತೆಯೂ ಸ್ನೇಹ ಮಯಿ ವ್ಯಕ್ತಿತ್ವ, ಎಂದಿಗೂ ಅಹಂಕಾರ ತೋರದೆ ಎಲ್ಲರ ಜೊತೆಯೂ ಬೆರತವರು.
ಈ ಬಾರಿ ನಿಗಮ ಮಂಡಳಿ ನೇಮಕ ಮಾಡಿ ಗಪೂರಿಗೆ ಕಾಂಗ್ರೆಸ್ ನ್ಯಾಯ ಸಲ್ಲಿಸಿದೆ. ಇದು ಪ್ರಾಮಾಣಿಕ ಕಾರ್ಯಕರ್ತರಿಗೆ ಸಂದ ಗೌರವ. ಇವರ ಈ ಅವಧಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಉತ್ತಮ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಸಿ.ಎಚ್ ಅಬ್ದುಲ್ ಮುತ್ತಾಲಿ ವಂಡ್ಸೆ ಅಭಿನಂದಿಸಿದ್ದಾರೆ.