


ಡೈಲಿ ವಾರ್ತೆ: 25/ಸೆ./2025


ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಗೆ ಪಿಡಿಒ ಕೊರತೆ – ಅಭಿವೃದ್ಧಿ ಹೊಡೆತ, ಗ್ರಾಮಸ್ಥರು ಆಕ್ರೋಶ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂರು ಗ್ರಾಮಗಳನ್ನೊಳಗೊಂಡ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಗೆ (ಪಿಡಿಒ) ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇಲ್ಲದೇ ಪಂಚಾಯತಿ ವ್ಯಾಪ್ತಿಯ ಕೆಲಸ ಕಾರ್ಯಗಳು ಆಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಗ್ರಾಮಸ್ಥರಿಗೆ ಕೂಡ ಪಂಚಾಯತಿನಲ್ಲಿ ಯಾವುದೇ ಕೆಲಸಕಾರ್ಯಗಳು ನಡೆಯುತ್ತಿಲ್ಲ,
ಅಧಿಕಾರಿಗಳ ವಿಳಂಬ ದೋರಣೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಗೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ತಕ್ಷಣ ಒಬ್ಬ ಸಮರ್ಥ ಪಿಡಿಓ ಅವರನ್ನು ತುರ್ತು ನೇಮಕ ಮಾಡಿ ಎಂದು
ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯಿತಿನ ಸದಸ್ಯರಾದ ಸಂತೋಷ ಪೂಜಾರಿ ಅಗ್ರಹಿಸಿದ್ದಾರೆ.