


ಡೈಲಿ ವಾರ್ತೆ: 27/ಸೆ./2025


ಕೋಟ| ನಿಯಂತ್ರಣ ತಪ್ಪಿ ಬ್ಯಾರೀಕೆಡ್ ಗೆ ಡಿಕ್ಕಿಹೊಡೆದ ಸ್ಕೂಟರ್ – ಮಹಿಳೆ ಗಂಭೀರ

ಕೋಟ: ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ಬ್ಯಾರೀಕೆಡ್ ಗೆ ಡಿಕ್ಕಿ ಹೊಡೆದು ಸಹಸವಾರೆ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಜಂಕ್ಷನ್ ನಲ್ಲಿ ಸಂಭವಿಸಿದೆ.
ಗಂಭೀರ ಗಾಯಗೊಂಡ ಮಹಿಳೆ ಮಲ್ಯಾಡಿ ಸತೀಶ್ ಶೆಟ್ಟಿಯವರ ಪತ್ನಿ ಶಾರದಾ ಶೆಟ್ಟಿ (52) ಎಂದು ಗುರುತಿಸಲಾಗಿದೆ.
ಪತಿ,ಪತ್ನಿ ಶುಕ್ರವಾರ ರಾತ್ರಿ 10:45ರ ಸುಮಾರಿಗೆ ಸ್ಕೂಟರ್ ನಲ್ಲಿ ಉಡುಪಿಯಿಂದ ಮಲ್ಯಾಡಿಗೆ ಬರುತ್ತಿದ್ದ ವೇಳೆ
ಕೋಟ ಜಂಕ್ಷನ್ ಬಳಿ ರಸ್ತೆಗೆ ಇಟ್ಟಿದ್ದ ಬ್ಯಾರೀಕೇಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದು ಹಿಂಬದಿ ಸವಾರಳಾದ ಶಾರದ ಶೆಟ್ಟಿ ಗಂಭೀರ ಗಾಯ ಗೊಂಡಿದ್ದು, ಸವಾರ ಸತೀಶ್ ಶೆಟ್ಟಿ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ಗಾಯಗೊಂಡವರನ್ನು ತಕ್ಷಣ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಚಾಲಕ ಕಿಶೋರ್ ಶೆಟ್ಟಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿರುತ್ತಾರೆ.
ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.