ಡೈಲಿ ವಾರ್ತೆ: 29/ಸೆ./2025

ತೆಕಟ್ಟೆ| ಮನೆಯ ಹಿಂಬದಿಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು – ನಗದು ಮತ್ತು ಚಿನ್ನಾಭರಣ ಕಳವು

ಕೋಟ: ಮನೆಯ ಹಿಂಬದಿಯ ಹಂಚು ಕಿತ್ತು ಒಳನುಗ್ಗಿ ನಗದು ಮತ್ತು ಚಿನ್ನಾಭರಣ ಕಳವು ಮಾಡಿದ ಘಟನೆ ಸೆ. 28 ರಂದು ರಾತ್ರಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಕನ್ನುಕೆರೆಯ ಶರತ್‌ ಎಂಬುವರ ಮನೆಯಲ್ಲಿ ನಡೆದಿದೆ.

ಘಟನೆ ವಿವರ:
ಶರತ್ ಅವರು ಸೆ.28 ರಂದು ರಾತ್ರಿ ಊಟ ಮಾಡಿ ಮಲಗಿದ್ದರು. ಸೆ.29 ರಂದು ಬೆಳಿಗ್ಗೆ 7:30 ಕ್ಕ ಏಳುವಾಗ ಯಾರೋ ಕಳ್ಳರು ಮನೆಯ ಮಾಡಿನ ಹಂಚನ್ನು ತೆಗೆದು ಮನೆ ಒಳಪ್ರವೇಶಿಸಿ ಗೋದ್ರೇಜ್‌ ನಲ್ಲಿದ್ದ ಕೀ ಯನ್ನು ಬಳಸಿ ಗೋದ್ರೇಜ್‌ ನ ಒಳಗಡೆ ಇಟ್ಟಿದ್ದ ರೂಪಾಯಿ 18,000/- ನಗದು, 3 ಗ್ರಾಂ ತೂಕದ ಒಂದು ಚಿನ್ನದ ಉಂಗುರ ಹಾಗೂ ಮಗುವಿನ ಬೆಳ್ಳಿಯ ಬಳೆ, ಕಾಲುಂಗುರ , ಸೊಂಟದ ಉಡಿದಾರ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 174/2025 ಕಲಂ: 331(4̧), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.