



ಡೈಲಿ ವಾರ್ತೆ: 29/ಸೆ./2025

ಸಮಾಜ ಸೇವೆಕ ಜಯರಾಜ್ ಸಾಲಿಯಾನ್ ಪಡುಕೆರೆ ಇವರಿಗೆ “ಕನ್ನಡ ಸೇವಾರತ್ನ” ಪ್ರಶಸ್ತಿ ಪ್ರದಾನ

ನವದುರ್ಗಾ ವೈಭವ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಾಗೃತಿ ಟ್ರಸ್ಟ್ ಬೆಂಗಳೂರು ಇವರ ನೇತೃತ್ವದಲ್ಲಿ (ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು) ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ,
ಸಮಾಜ ಸೇವೆ ಹಾಗೂ ರಕ್ತ ದಾನ ಕ್ಷೇತ್ರದಲ್ಲಿ ಹಲವಾರು ಮಕ್ಕಳ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದವರ ಚಿಕಿತ್ಸೆಗೆ ,ಮತ್ತು ಗೃಹ ನಿರ್ಮಾಣಕ್ಕೆ ಧನಸಹಾಯ ಒದಗಿಸಿರುವ, ತುರ್ತು ಸಂದರ್ಭಗಳಲ್ಲಿ ರಕ್ತ ಪುರೈಕೆ ರಕ್ತ ದಾನ ಮಾಡಿ ಮಾನವೀಯತೆ ಮೇರೆದಿರುವ ಜಯರಾಜ್ ಸಾಲಿಯಾನ್ ಪಡುಕೆರೆ ಅವರ ಸಾಧನೆಗೆ “ಕನ್ನಡ ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಜಯರಾಜ್ ಸಾಲಿಯಾನ್ ಅವರ ಸಾಧನೆಗೆ
ಟೀಮ್ ಜೈ ಕುಂದಾಪ್ರ ಅಭಿನಂದನೆ ಸಲ್ಲಿಸಿದೆ.