ಡೈಲಿ ವಾರ್ತೆ: 08/ಅ./2025

ಮೂಡುಬಿದಿರೆ| ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಮೂರು ದನಗಳ ರಕ್ಷಣೆ, ಆರೋಪಿಗಳು ಪರಾರಿ

ಮೂಡುಬಿದಿರೆ: ಇಲ್ಲಿನ ಗಂಟಾಲ್ಕಟ್ಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ 3 ದನಗಳನ್ನು ರಕ್ಷಿಸಿದ್ದಾರೆ.

ಜಲೀಲ್ ಕಲ್ಲಬೆಟ್ಟು ಎಂಬಾತನ ಮನೆಯ ಹಿಂಭಾಗದ ಗುಡ್ಡದಲ್ಲಿ ಹಸುವನ್ನು ಕಡಿದು ಮಾಂಸ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದು ಕೊಂಡ ಪೊಲೀಸರಿಗೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ದಾಳಿ ಸಂದರ್ಭ ದನವನ್ನು ಕಡಿದು ಮಾಂಸ ಮಾಡುತ್ತಿರುವುದು ಕಂಡು ಬಂದಿದೆ. ಸುಮಾರು 50 ಕೆ.ಜಿ. ದನದ ಮಾಂಸ ಮತ್ತು ಅದನ್ನು ಕತ್ತರಿಸಲು ಬಳಸಿದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳನ್ನು ಜಲೀಲ್ ಕಲ್ಲಬೆಟ್ಟು, ಸಾಹಿಲ್ ಮತ್ತು ಆತನ ಮಗ ಸೊಹೇಲ್, ಹಾಗೂ ಕುದ್ರೋಳಿ ನಿವಾಸಿ ಮುಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.

ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿಗಳು ಮನೆಯ ಹಿಂಬದಿಯ ಗುಡ್ಡದಾಚೆ ಓಡಿ ಪರಾರಿಯಾಗಿದ್ದಾರೆ ಘಟನಾ ಸ್ಥಳಕ್ಕೆ ಮಾಂಸವನ್ನು ಪಡೆಯಲು ಬಂದಿದ್ದ ಎರಡು ಕಾರುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.