



ಡೈಲಿ ವಾರ್ತೆ: 09/ಅ./2025

ಏಕಾಏಕಿ ಪೆಟ್ರೋಲ್ ಬಂಕ್ಗೆ ನುಗ್ಗಿದ ಕಂಟೇನರ್ ಲಾರಿ – ತಪ್ಪಿದ ಬಾರೀ ಅನಾಹುತ!
ಬೆಂಗಳೂರು: ಶ್ರೀರಂಗಪಟ್ಟಣದಿಂದ ಕೆಆರ್ ಮಾರ್ಕೆಟ್ಗೆ ಅಡುಗೆ ಎಣ್ಣೆ ಕೊಂಡೊಯ್ಯುತ್ತಿದ್ದ ಕಂಟೇನರ್ ಲಾರಿಯೊಂದು ಬ್ರೇಕ್ ಫೇಲ್ ಆಗಿ ಏಕಾಏಕಿ ಪೆಟ್ರೋಲ್ ಬಂಕ್ಗೆ ನುಗ್ಗಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಕಂಟೇನರ್ ನುಗ್ಗಿದ ರಭಸಕ್ಕೆ ಪೆಟ್ರೋಲ್ ಬಂಕ್ ಒಳಗಿದ್ದ ಅಂಗಡಿ ಜಖಂಗೊಂಡಿದೆ. ಅಂಗಡಿ ಒಳಗಿದ್ದ ಸಿಬ್ಬಂದಿ ಹಾಗೂ ಕಂಟೈನರ್ ಚಾಲಕನ ಕೈಗೆ ಗಾಯಗಳಾಗಿವೆ.
ಘಟನೆ ಸಂದರ್ಭ ಅನೇಕ ಗ್ರಾಹಕರು ಬೈಕ್ ಹಾಗೂ ಇತರ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದರು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.