



ಡೈಲಿ ವಾರ್ತೆ: 11/ಅ./2025

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಳಾವರದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಕುಂದಾಪುರ: ಸಕಾ೯ರಿ ಆಯುರ್ವೇದ ಚಿಕಿತ್ಸಾಲಯ ಕಾಳಾವರದಲ್ಲಿ,ಆಯುಷ್ ಮಾನ್ ಆರೋಗ್ಯ ಉಪ ಕೇಂದ್ರ ಸಳ್ವಾಡಿ, ಆಯುಷ್ ಮಾನ್ ಆರೋಗ್ಯ ಮಂದಿರ ಕಾಳಾವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ, ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ , ಪೌಷ್ಟಿಕ ಆಹಾರ ಸಪ್ತಾಹ, ಸೀಮಂತ ಕಾರ್ಯಕ್ರಮವು ಅ.11 ರಂದು ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಮಂಜುನಾಥ ಶೆಟ್ಟಿಗಾರ್ ವಹಿಸಿದ್ದರು. ಅತಿಥಿಗಳಾಗಿ ಪಂಚಾಯತ್ ಸದಸ್ಯರುಗಳಾದ ರಾಮಚಂದ್ರ ನಾವಡ, ಚಂದ್ರ ಪೂಜಾರಿ, ರಾಜೀವಿ ಶೆಡ್ತಿ, ಸುಪ್ರೀತಾ ನವೀನ್ ಹಾಗೂ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ. ಸವೋ೯ತ್ತಮ ಶೆಟ್ಟಿ, ಸಮುದಾಯ ಆರೋಗ್ಯ ಅಧಿಕಾರಿ ಪ್ರಶಾಂತ್ ಕೊಠಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜು ಬಿಲ್ಲವ ಹಾಗೂ ಅಂಗನವಾಡಿ ಸೂಪರ್ವೈಸರ್ ಶ್ರೀಮತಿ ಸುಜಯ ಉಪಸ್ಥಿತರಿದ್ದರು.
ವೇದಿಕೆಯ ಗಣ್ಯರೆಲ್ಲಾ ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀಮತಿ ಸುಶೀಲಾ ಜೋಗಿ ಪ್ರಾಥಿ೯ಸಿದರು.
ಕಾರ್ಯಕ್ರಮದ ಉದ್ದೇಶದ ಬಗ್ಗೆ ಶ್ರೀಮತಿ ಸುಜಯ ವಿವರಿಸಿದರು.
ಪೌಷ್ಟಿಕ ಆಹಾರದ ಬಗ್ಗೆ ಡಾ.ಕೆ.ಸವೋ೯ತ್ತಮ ಶೆಟ್ಟಿ, ಪ್ರಶಾಂತ್ ಕೊಠಾರಿ ಉಪನ್ಯಾಸ ನೀಡಿದರು.
ಐದು ಜನ ಗಭಿ೯ಣಿಯರಿಗೆ ಶಾಸ್ತ್ರೀಯವಾಗಿ ಸೀಮಂತ ಕಾರ್ಯಕ್ರಮ ನಡೆಯಿತು.
ಸೀಮಂತದ ತಿಂಡಿ ತಿನಿಸುಗಳ ಜೊತೆ ಲಘು ಉಪಹಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆಶಾಕಾಯ೯ಕತೆ೯ಯರು, ಅಂಗನವಾಡಿ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಶ್ರೀಮತಿ ಅನುಸೂಯ ವಂದನಾಪ೯ಣೆಗೈದರು