



ಡೈಲಿ ವಾರ್ತೆ: 11/ಅ./2025

ಕುಮಟಾ| ಕಳ್ಳತನ ಪ್ರಕರಣದ ಆರೋಪಿಯೋರ್ವ ಪೊಲೀಸರ ಕೈಯಿಂದ ಎಸ್ಕೇಪ್!

ಕುಮಟಾ: ಕಳ್ಳತನ ಪ್ರಕರಣದ ಆರೋಪಿಯೋರ್ವ ಎಸ್ಕೇಪ್ ಆಗಿರುವ ಘಟನೆ ಕುಮಟಾದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪಟ್ಟಣದ ಗಿಬ್ ಸರ್ಕಲ್ ಬಳಿಯ ಬ್ಯಾಟರಿ ಶಾಪ್ ಕಳ್ಳತನ ಪ್ರಕರಣದಲ್ಲಿ ಕುಮಟಾ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಆರೋಪಿಗಳನ್ನ ಶುಕ್ರವಾರ ರಾತ್ರಿ ಮೆಡಿಕಲ್ ಮಾಡಿಸಲು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ಆರೋಪಿಗಳಿಬ್ಬರಿಗೂ ಮೆಡಿಕಲ್ ಮಾಡಿಸಿ, ವಾಪಸ್ ತೆರಳುವಾಗ ಓರ್ವ ಆರೋಪಿ ಪೊಲೀಸ್‌ರ ಕೈಯಿಂದ ತಪ್ಪಿಸಿಕೊಂಡು ಆಸ್ಪತ್ರೆಯ ಕಂಪೌಂಡ್ ಹಾರಿ ಎಸ್ಕೆಪ್ ಆಗಿದ್ದಾನೆ.
ಪರಾರಿಯಾದ ಆರೋಪಿಯನ್ನ ಹಿಡಿಯಲು ಹೋದ ಪೊಲೀಸರು ಕೂಡ ಕಂಪೌಂಡ್ ಜಿಗಿಯುವಾಗ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಕತ್ತಲಾದ ಕಾರಣ ಆರೋಪಿ ಯಾವ ಕಡೆ ಓಡಿ ಹೋದ ಎಂದು ಗೊತ್ತಾಗಿಲ್ಲ. ಪರಾರಿಯಾದ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಭಾವಚಿತ್ರದಲ್ಲಿರುವ ಈ ಆರೋಪಿ ಕಂಡುಬಂದರೆ ‘ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08386-222333 ನಂಬರ್‌ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.