ಡೈಲಿ ವಾರ್ತೆ: 13/ಅ./2025

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ RSS ಗೆ 100ರ ಸಂಭ್ರಮ ! ಒಡೆದು ಆಳಿದ ಬ್ರಿಟಿಷ್ ಗುಲಾಮ ಗಿರಿಯ ಸಂಕೇತ

ರಾಜ್ಯ, ದೇಶದಾದ್ಯಂತ RSS ಪತ ಸಂಚಲನ ನಿನ್ನೆ ಮಾಡಿದ್ದಾರೆ, ದೇಶದ ಸ್ವಾತಂತ್ರ ಪೂರ್ವ ಸುಮಾರು 25 ವರ್ಷಗಳ ಹಿಂದೆ RSS ಇದೆ ಎಂದು 100 ವರ್ಷದ ಆಚರಣೆ ಮಾಡಲಾಗಿದೆ. ಇದು ಸಂತೋಷದ ವಿಚಾರ ಆದರೆ ಬ್ರಿಟಿಷರ ವಿರುದ್ಧ ಒಂದೇ ಒಂದು ಸೊಲ್ಲೆತ್ತದೇ, ದೇಶ ರಕ್ಷಣೆಗಾಗಿ ಯಾವುದೇ ಹೋರಾಟದಲ್ಲಿ ಭಾಗವಹಿಸದೆ, ದೇಶವನ್ನು ಗುಲಾಮಗಿರಿಗೆ ತಳ್ಳಿದವರ ಗುಲಾಮಗಿರಿಯನ್ನೇ ಮಾಡಿದ ಆರ್ ಎಸ್ಎಸ್ ದೇಶಕ್ಕಾಗಿ ಮಾಡಿದಾದರೂ ಏನು.? ಎನ್ನುವ ಪ್ರೆಶ್ನೆ ಸಾಮಾನ್ಯ ದೇಶವಾಸಿಯದ್ದಾಗಿದೆ.

ಬ್ರಿಟಿಷರ ಒಡೆದು ಆಳುವ ನೀತಿಗೆ ತನ್ನನ್ನು ಸಮರ್ಪಿಸಿ ಕೊಂಡಿರುವ RSS ಹಿಂದುತ್ವದ ಹೆಸರಿನಲ್ಲಿ ಸನಾತನ ಹಿಂದೂ ಧರ್ಮಕ್ಕೆ ಹಿಂಸೆ, ದ್ವೇಷದ ಲೇಪ ಹಚ್ಚುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವೆನಿಸಿರುವ ಭಾರತ ದೇಶದಲ್ಲಿ ಸಂಘರ್ಷಕ್ಕೆ ಅಂಕಿತ ವಿಡುತ್ತಿದೆ.
ಪದೇ ಪದೇ ಹಿಂದುತ್ವ, ಅಪಾಯದಲ್ಲಿದೆ ದೇಶ ವಾಸಿಗಳಿಗೆ ಮಂಕು ಬೂದಿ ಎರಚುತ್ತಾ ಬಿಜೆಪಿ ಹೆಸರಿನಲ್ಲಿ, ವಾಮ ಮಾರ್ಗಗಳ ಮೂಲಕ ದೇಶದ ಅಧಿಕಾರವನ್ನು ಪಡೆದಿರುವ RSS ಲಾಠಿಗಳನ್ನು ಹಿಡಿದು ಮೆರವಣಿಗೆಯನ್ನು ಮಾಡಿ ಬೇಗುದಿಯನ್ನು ಸೃಷ್ಟಿಸಿದ್ದನ್ನು ಬಿಟ್ಟರೆ ಹಿಂದುತ್ವ ಹಾಗೂ ದೇಶಕ್ಕಾಗಿ ಮಾಡಿದಾದರೂ ಏನು ಎನ್ನುವುದು ದೇಶದ ಪ್ರತಿಯೊರ್ವ ಪ್ರಜ್ಞಾವಂತ ನಾಗರಿಕನು ಕೇಳುವ ಪ್ರೆಶ್ನೆಯಾಗಿದೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಪ್ರಶ್ನಿಸಿದ್ದಾರೆ.