ಡೈಲಿ ವಾರ್ತೆ: 13/ಅ./2025

ಸಾಸ್ತಾನ| ಬೈಕ್ ಡಿಕ್ಕಿ – ತಾಯಿ,ಮಗ ಗಂಭೀರ ಗಾಯ

ಕೋಟ: ಬೈಕ್ ಡಿಕ್ಕಿ ಹೊಡೆದು ತಾಯಿ ಮತ್ತು ಮಗ ಗಂಭೀರ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನದ ಪಾಂಡೇಶ್ವರ ಗ್ರಾಮದ ಶಿವಕೃಪಾ ಹಾಲ್ ಬಳಿ ಸಂಭವಿಸಿದೆ.

ಗಾಯಗೊಂಡ ತಾಯಿ ಮತ್ತು ಮಗ ಪಾಂಡೇಶ್ವರದ ಅನಿತಾ ಹಾಗೂ ಅದ್ವಿಕ್‌ ಎಂದು ಗುರುತಿಸಲಾಗಿದೆ.

ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ವಿವೇಕ ತನ್ನ ಟಿವಿಎಸ್‌ ಅಪಾಚಿ ಮೋಟಾರ್‌ ಬೈಕ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿ ನಿಂತಿದ್ದ ಅನಿತಾ ಹಾಗೂ ಅವರ ಮಗ ಅದ್ವಿಕ್‌ ಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ಪರಿಣಾಮ ತಾಯಿ ಮತ್ತು ಮಗ ಗಂಭೀರ ಗಾಯ ಗೊಂಡಿದ್ದರು.ತಕ್ಷಣ ಸ್ಥಳೀಯರು ಸೇರಿ ಟೋಲ್ ಗೇಟ್ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿರುತ್ತಾರೆ.
ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.