



ಡೈಲಿ ವಾರ್ತೆ: 14/ಅ./2025

ಉಡುಪಿ| ಆರ್ಯ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿ ಮಾಲೀಕನ ಮನೆಗೆ ನುಗ್ಗಿದ ಕಳ್ಳರು – 1ಕೆ.ಜಿ. ಅಧಿಕ ಚಿನ್ನ ಕಳ್ಳತನ!

ಉಡುಪಿ: ಆರ್ಯ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿ ಮಾಲೀಕನ ಮನೆಗೆ ನುಗ್ಗಿದ ಕಳ್ಳರು 1 ಕೆಜಿ ಅಧಿಕ ಚಿನ್ನದ ಗಟ್ಟಿ ಕಳ್ಳತನ ಮಾಡಿರುವ ಘಟನೆ ಉಡುಪಿ ಗುಂಡಿಬೈಲಿನಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಆರ್ಯ ಗೋಲ್ಡ್ ಮಾಲೀಕ ಅಜಯ್ ಜಾಧವ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರ ಗುಂಡಿಬೈಲಿನ ಮನೆಗೆ ನುಗ್ಗಿದ ಕಳ್ಳರು ಒಂದು ಕೆಜಿಗೂ ಅಧಿಕ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ