



ಡೈಲಿ ವಾರ್ತೆ: 16/ಅ./2025

ದೀಪಾವಳಿಗೆ ಅಕ್ರಮ ಪಟಾಕಿ ಸಂಗ್ರಹ: ಕಾರ್ಕಳ, ಬ್ರಹ್ಮಾವರ, ಕೋಟದಲ್ಲಿ ಪೊಲೀಸ್ ರೇಡ್

ಉಡುಪಿ: ಕಾರ್ಕಳ ನಗರ, ಬ್ರಹ್ಮಾವರ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ 3 ಸ್ಥಳಗಳಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ಅನಧಿಕೃತ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳನ್ನು ಪತ್ತೆಹಚ್ಚಿ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಾಗುತ್ತಿದೆ.
ವಶಪಡಿಸಿಕೊಂಡ ಪಟಾಕಿಗಳನ್ನು ಪರವಾನಗಿಯುಳ್ಳ ಸ್ಫೋಟಕ ಮ್ಯಾಗಜೀನ್ ಸಂಗ್ರಹ ಸ್ಥಳಕ್ಕೆ ಸ್ಥಳಾಂತರಿಸಿ, ನಂತರ ನಾಶಪಡಿಸಲಾಗುವುದು.
ಮಿಯಾರ್, ಕುಂಜಾಲು ಹಾಗೂ ತೆಕ್ಕಟ್ಟೆ ಪ್ರದೇಶಗಳಲ್ಲಿ ಈ ದಾಳಿ ನಡೆದಿದೆ.
ಈ ಬಗ್ಗೆ ಸ್ಫೋಟಕ ಕಾಯ್ದೆ ಸೆಕ್ಷನ್ 9B(1)(b) ಹಾಗೂ ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್ 287, 288 ರಡಿ ಪ್ರಕರಣ ದಾಖಲಿಸಲಾಗಿದೆ.