ಡೈಲಿ ವಾರ್ತೆ: 17/ಅ./2025

ಕಾಳಾವರ ರೈಲ್ವೆ ಸೇತುವೆ ಮೇಲೆ ಕಸ ಬಿಸಾಡಿದವರಿಗೆ ದಂಡ – ಅವರಿಂದಲೇ ಸ್ವಚ್ಛತೆ!

ಕುಂದಾಪುರ: ಕಾಳಾವರ ಗ್ರಾಮದಲ್ಲಿ ರೈಲ್ವೆ ಸೇತುವೆ ಮೇಲ್ಗಡೆ ರಸ್ತೆ ಬದಿಯಲ್ಲಿ ಕಸ ಬಿಸಾಡಿದ ಘಟನೆ ಬೆಳಕಿಗೆ ಬಂದ ತಕ್ಷಣ, ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಯಿತು.

ಕಸ ಬಿಸಾಡಿದ ವ್ಯಕ್ತಿಯನ್ನು ಪಂಚಾಯತ್ ಕಚೇರಿಗೆ ಕರೆಸಿ, ಅವರಿಗೆ ದಂಡ ವಿಧಿಸಿ, ಅದೇ ಕಸವನ್ನು ಸಂಜೆ ಅವರಿಂದಲೇ ಸ್ವಚ್ಛಗೊಳಿಸಲಾಯಿತು.

ಈ ಕ್ರಮದಿಂದ ಗ್ರಾಮಸ್ಥರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ.

ಘಟನೆಯಲ್ಲಿ ಸಹಕರಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯವರಿಗೆ ಧನ್ಯವಾದಗಳು ಸಲ್ಲಿಸಿದ್ದಾರೆ ಸದಸ್ಯ ಜಯಪ್ರಕಾಶ್ ಶೆಟ್ಟಿ.

ಸಮಾಜದ ಪ್ರತಿಯೊಬ್ಬರೂ ಸ್ವಚ್ಛತೆಗೆ ಕೊಡುಗೆ ನೀಡಬೇಕು ಎಂಬ ಸಂದೇಶವನ್ನು ಈ ಘಟನೆಯು ಮತ್ತೆ ನೆನಪಿಸಿದೆ.