



ಡೈಲಿ ವಾರ್ತೆ: 18/ಅ./2025

ಮಣಿಪಾಲ| ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಮಣಿಪಾಲ: ಇಲ್ಲಿನ ರಾಹುಲನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ಶವವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.
ಮೃತರನ್ನು ಆರ್. ಸೆಲ್ವರಾಜ್ ಎಂದು ಗುರುತಿಸಲಾಗಿದೆ.
ಈತ ಮೂಲತಃ ತಮಿಳುನಾಡಿನವರಾಗಿದ್ದು. ಇಲ್ಲಿ 30 ವರ್ಷಗಳಿಂದ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇವರು ಮೃತಪಟ್ಟು ನಾಲ್ಕು ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ.
ಕಡ್ತಲ ಸದಾನಂದ ಮೂಲ್ಯ ಎಂಬ ವ್ಯಕ್ತಿಯಿಂದ ಘಟನೆ ವಿಷಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಮಣಿಪಾಲ ಪೋಲಿಸ್ ಠಾಣೆಯ ಎಎಸ್ ಐ ವಿಜಯ್, ಮುಖ್ಯ ಆರಕ್ಷಕ ಶಶಿಧರ್, ಸುರೇಶ್ ಶೆಟ್ಟಿ ಆಗಮಿಸಿ ಅಗತ್ಯ ಕಾನೂನು ಪ್ರಕ್ರಿಯೆ ನಡೆಸಿದರು.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿ ಸಾವಿಗೆ ಕಾರಣ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.