



ಡೈಲಿ ವಾರ್ತೆ: 19/ಅ./2025

ವ್ಯಾಪಾರಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾದ ದುಷ್ಕರ್ಮಿಗಳು

ಕಾಸರಗೋಡು: ಕಾರಿನಲ್ಲಿ ಬಂದ ಇಬ್ಬರು ದುರ್ಷ್ಕಮಿಗಳು ಓಮ್ನಿ ವ್ಯಾನ್ ನ್ನು ತಡೆದು ವ್ಯಾಪಾರಿಯ ಕುತ್ತಿಗೆಯಲ್ಲಿದ್ದ ಮೂರು ಪವನ್ ನ ಚಿನ್ನದ ಸರ ಎಗರಿಸಿದ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ವರ್ಕಾಡಿ ಅರಿಬೈಲು ನಿವಾಸಿ ಸೀತಾರಾಮ ಶೆಟ್ಟಿ ( 33) ರವರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಲಾಗಿದೆ. ಮೊರತ್ತನೆ ಯಲ್ಲಿ ಚಿಕನ್ ಸೆಂಟರ್ ಮಾಲಕರಾಗಿರುವ ಸೀತಾರಾಮ ಶೆಟ್ಟಿ ರವರು ಮಧ್ಯಾಹ್ನ ಅಂಗಡಿಯಿಂದ ವ್ಯಾನ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ವ್ಯಾನ್ ನ್ನು ತಡೆದು ಕೃತ್ಯ ನಡೆಸಿರುವುದಾಗಿ ದೂರಲಾಗಿದೆ.
ಬಳಿಕ ಕಾರಲ್ಲಿದ್ದವರು ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.