



ಡೈಲಿ ವಾರ್ತೆ: 23/ಅ./2025

ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ಸಂಭ್ರಮದ ದೀಪಾವಳಿ ಆಚರಣೆ

ಕುಂದಾಪುರ| ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ, ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಯುವ ಮನಸ್ಸುಗಳಿಗೆ ಸ್ಫೂರ್ತಿ ನೊಂದವರಿಗೆ ನೆರವಿನ ದಾರಿ ದೀಪ, ಧ್ಯೇಯ ವಾಕ್ಯದೊಂದಿಗೆ ಹಸ್ತ ಚಿತ್ತ ಪೌಂಡೇಶನ್(ರಿ.) ಸಹಯೋಗದಲ್ಲಿ ಅ.19 ರಂದು ಸಂಭ್ರಮದ ದೀಪಾವಳಿ ಹಬ್ಬ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಸಮಾಜಿಕ ಕಾರ್ಯಕರ್ತ, ರಾಷ್ಟ್ರೀಯ ಮಾನವ ಹಕ್ಕು ಸಮಿತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟರವರು ದೀಪಾ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಟ್ರಸ್ಟ್ ನ ಅಧ್ಯಕ್ಷ ಪುಂಡಲೀಕ ಮೊಗವೀರ ಪ್ರಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ, ಉಡುಪಿ ಜಿಲ್ಲೆ ಕೋಟೇಶ್ವರ ಘಟಕದ
ಮೊಗವೀರ ಯುವ ಸಂಘಟನೆ ಅಧ್ಯಕ್ಷ ರಾಘವೇಂದ್ರ ಹರಪನಕೆರೆ, ಹಸ್ತ ಚಿತ್ತ ಪೌಂಡೇಶನ್ ರಿ. ಅಧ್ಯಕ್ಷೆ
ಶ್ರೀಮತಿ ಶರ್ಮಿಳಾ ಕಾರಂತ್, ಶ್ರೀ ಶಾಸ್ತ ಮೊಬೈಲ್ ಕೋಟ ಇದರ ಮಾಲಕ ಆದಿತ್ಯ ಕೋಟ, ಜೈ ಕುಂದಾಪ್ರ ಸಂಸ್ಥೆಯ ಹಿರಿಯ ಸದಸ್ಯ ಗಣೇಶ್ ಭಟ್, ಬೆಳಕು ಪೌಂಡೇಶನ್ ಸಂಸ್ಥೆಯ ಅಧ್ಯಕ್ಷರು ಅನಿರುದ್ದ್, ಆಶ್ರಮದ ಸಂಸ್ಥಾಪಕ ವಿನಯ್ ಚಂದ್ರ ಸಾಸ್ತಾನ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆ; ಶ್ರೀಮತಿ ಅಕ್ಷತಾ ಗಿರೀಶ್ ವಹಿಸಿದ್ದರು, ಗಾಯಕಿ ಗಾಯತ್ರಿ ವಿಕ್ರಮ್ ತೆಕ್ಕಟ್ಟೆ ಪ್ರಾರ್ಥನೆ ನೆರವೇರಿಸಿ,
ಜೈ ಕುಂದಾಪ್ರ ಸಂಸ್ಥೆಯಿಂದ, ಆಶ್ರಮಕ್ಕೆ ಹತ್ತು ಸಾವಿರ ಹಾಗೆ ಉಡುಪಿ ವಿಕ್ಕಿ ಮೊಬೈಲ್ ಮಾಲಿಕರು ಹಾಗೂ ಟ್ರಸ್ಟ್ ನ ಗೌರವ ಸಲಹೆ ಗಾರರಾದ ವಿವೇಕ್ ಜಿ ಸುವರ್ಣ, ಐದು ಸಾವಿರ ರೂ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಪ್ರದೀಪ್ ಬಸ್ರೂರು ಅವರನ್ನ ಸಮ್ಮಾನಿಸಲಾಯಿತು.
ಆಶ್ರಮದ ವಾಸಿಗಳಿಗೆ, ಮನರಂಜನೆ ಸಲುವಾಗಿ ಸಂಗೀತ ಸಂಜೆ, ರವಿ ಬನ್ನಾಡಿ ಗಾಯಕರು ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಅಘೋರೇಶ್ವರ ಮೆಲೋಡಿಸ್ ಭವ್ಯ ಕುಂದಾಪುರ ಗಾಯಕಿ, ಗಾಯತ್ರಿ ತೆಕ್ಕಟ್ಟೆ,
ಶಿವರಾಮ್ ಕೋಡಿ ಗಾಯಕರು ನೆರವೇರಿಸಿದರು.
ಟ್ರಸ್ಟ್ ನ ಜಯರಾಜ್ ಸಾಲಿಯಾನ್ ಪಡುಕೆರೆ ಧನ್ಯವಾದ ಸಮರ್ಪಿಸಿದರು.
ಹಸ್ತ ಚಿತ್ತ ಪೌಂಡೇಶನ್ ನ ಸದಸ್ಯರಾದ ಚಂದನ್ ಗೌಡ, ಕೃತಿಕಾ, ಜೈ ಕುಂದಾಪ್ರ ಟ್ರಸ್ಟ್ ನ ಸದಸ್ಯರಾದ ಸುಧೀರ್ ಕುಂದಾಪುರ, ಸಂತೋಷ್ ಮಣೂರು,ಸುಶಾಂತ್ ಬೈಂದೂರು ಪತ್ರಕರ್ತರು, ಸಂತೋಷ್ ಪಡುಕೆರೆ, ಪ್ರವೀಣ್ ಪಡುಕೆರೆ, ಗಿರಿಜಾ ಸುವರ್ಣ ಮತ್ತಿತರರು ಭಾಗವಹಿಸಿದರು.