ಡೈಲಿ ವಾರ್ತೆ: 28/ಅ./2025

ಹೆಬ್ರಿ| ಹಂದಿಗೆ ಇರಿಸಿದ್ದ ಉರುಳಿಗೆ ಬಿದ್ದ ಚಿರತೆ – ಅರಣ್ಯ ಇಲಾಖೆಯಿಂದ ರಕ್ಷಣೆ

ಹೆಬ್ರಿ: ಉಡುಪಿಯ ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ಚಿರತೆಯೊಂದು ಸೆರೆಯಾಗಿದೆ. ಅರಣ್ಯ ಪ್ರದೇಶದಲ್ಲಿ ಹಂದಿಗೆ ಇರಿಸಲಾಗಿದ್ದ ಉರುಳಿಗೆ ಸಿಲುಕಿ ಬಿದ್ದಿದೆ. ಉರುಳು ಸುತ್ತಿದ ಗೂಟದೊಂದಿಗೆ ಒದ್ದಾಡುತ್ತಿರುವ ಚಿರತೆಯನ್ನು ಸ್ಥಳೀಯರು ಗಮನಿಸಿದ್ದಾರೆ. ಗಾಯಗೊಂಡ ಚಿರತೆ ವ್ಯಾಘ್ರ ವಾದ್ದರಿಂದ ಯಾರೂ ಸಮೀಪಕ್ಕೆ ಹೋಗಿಲ್ಲ. ಬಳಿಕ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಅರವಳಿಕೆ ಕೊಟ್ಟು, ಚಿರತೆಯನ್ನು ರಕ್ಷಿಸಿದ್ದಾರೆ. ಪಶು ವೈದ್ಯರಾದ ಡಾಕ್ಟರ್ ಮೇಘನಾ, ಡಾಕ್ಟರ್ ಯಶಸ್ವಿನಿ ಮತ್ತು ಉಚ್ಚು ಟ್ರಸ್ಟ್ ನ ಅಕ್ಷಯ್ ಶೇಟ್ ಈ ಕಾರ್ಯಾಚರಣೆಯಲ್ಲಿ ನೆರವು ನೀಡಿದರು. ರಕ್ಷಿಸಲ್ಪಟ್ಟ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.