



ಡೈಲಿ ವಾರ್ತೆ: 29/ಅ./2025

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ| ಕೋಟ ಎಜುಕೇರ್ ಸಂಸ್ಥೆಯ ಆರು ವಿದ್ಯಾರ್ಥಿಗಳು ವಿಜೇತರು

ಕೋಟ: ಆಳ್ವಾಸ್ ಪಿಯು ಕಾಲೇಜಿನಲ್ಲಿ ಅ.26 ರಂದು ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 20ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ 2025 ಸ್ಪರ್ಧೆಯಲ್ಲಿ ಕೋಟ ಎಜುಕೇರ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳಾದ ಅನೀಕ್ಷ ಎಂ ಪ್ರಥಮ ಸ್ಥಾನ, ಸಿದ್ಧಾಂತ ಕುಂದರ್, ಆತಿಷ್ ಎಸ್ ಪೂಜಾರಿ ದ್ವಿತೀಯ ಸ್ಥಾನ, ಅಥರ್ವ ಆರ್ ಕೊಠಾರಿ, ತೃತೀಯ ಸ್ಥಾನ, ಅದಿತಿ ಮೊಗವೀರ ಹಾಗೂ ರಿಷಿ ಆರ್ ಮೊಗವೀರ ಚತುರ್ಥ ಸ್ಥಾನ ಪಡೆದಿರುತ್ತಾರೆ.
ಇವರಿಗೆ ಪ್ರಸನ್ನ ಕೆ ಮತ್ತು ಸುಪ್ರೀತ ಮೊಗವೀರ ತರಬೇತುದಾರರಾಗಿದ್ದಾರೆ. ಕೋಟ ಎಜುಕೇರ್ ಸಂಸ್ಥೆಯ ನಿರ್ದೇಶಕರಾದ ಚೇತನ್ ಎಂ ಬಂಗೇರ ಎಲ್ಲರಿಗೂ ಅಭಿನಂದಿಸಿದ್ದಾರೆ.