ಡೈಲಿ ವಾರ್ತೆ: 29/ಅ./2025

ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ – ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆ, ಗಂಗೊಳ್ಳಿಯ ಐದು ವಿದ್ಯಾರ್ಥಿಗಳು ವಿಜೇತರು

ಗಂಗೊಳ್ಳಿ: ಆಳ್ವಾಸ್ ಪಿಯು ಕಾಲೇಜಿನ ಕೆ. ಅಮರ್ನಾಥ್ ಶೆಟ್ಟಿ ವೇದಿಕೆಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 20ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ 2025 ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ಶ್ರೀಧರ್ ಗಾಣಿಗ ದ್ವಿತೀಯ ಸ್ಥಾನ ಹಾಗೂ ಐದನೇ ತರಗತಿಯ ಒಲಿಟಾ ರೆಬೆಲ್ಲೊ ಹಾಗೂ ಆನ್ಸನ್ ಮೂರನೇ ಸ್ಥಾನವನ್ನು ಹಾಗೂ ನಾಲ್ಕನೇ ತರಗತಿಯ ಪೃಥ್ವಿರಾಜ್ ಹಾಗೂ 7ನೇ ತರಗತಿಯ ರೆನಿಟಾ ಫೆರ್ನಾಂಡಿಸ್ ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ವಿಜಯ ಕ್ರಾಸ್ತರವರು, ಶಿಕ್ಷಕ ಶಿಕ್ಷಕೇತರ ವೃಂದದವರು ,ಪೋಷಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ