



ಡೈಲಿ ವಾರ್ತೆ: 08/NOV/2025

ಅರೋಗ್ಯದಲ್ಲಿ ಚೇತರಿಕೆ ಕಂಡ ಯಕ್ಷ ಚಂದ್ರಿಕೆ ಶಶಿಕಾಂತ್ ಶೆಟ್ಟಿ

ಮಣಿಪಾಲ: ಕಳೆದ ಮೂರು ದಿನದಿಂದ ನ್ಯೂಮೋನೀಯ ಸಮಸ್ಯೆಗೆ ಒಳಗಾದ ಖ್ಯಾತ ಯಕ್ಷಗಾನ ಕಲಾವಿದರಾದ ಶಶಿಕಾಂತ್ ಶೆಟ್ಟಿ ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ಕಳೆದೆರಡು ದಿನದಿಂದ ಅರೋಗ್ಯ ಸ್ಥಿತಿಯೂ ಗಂಭಿರವಾಗಿದ್ದು, ಅಭಿಮಾನಿಗಳು ಆತಂಕಕ್ಕೆ ಕಾರಣವಾಗಿತ್ತು. ಸಾಲಿಗ್ರಾಮ ಮೇಳ ಸೇರಿದಂತೆ ಅನೇಕ ಯಕ್ಷಗಾನ ಕಾರ್ಯಕ್ರಮದಲ್ಲಿ ಪ್ರಧಾನ ಸ್ತ್ರೀ ವೇಷದಾರಿಯಾಗಿ ಕುಣಿತ ಮತ್ತು ಮಾತುಗಾರಿಕೆಯಲ್ಲಿ ಅಪಾರ ಜನಮನ್ನಣೆಗಳಿಸಿದ್ದರು. ಅಭಿಮಾನಿಗಳ ಹಾರೈಕೆಯಂತೆ ಇದೀಗ ಅರೋಗ್ಯ ಸುಧಾರಿಸಿದ್ದು ಅಭಿಮಾನಿಗಳಿಲ್ಲಿ ನೆಮ್ಮದಿ ಮೂಡಿಸಿದೆ.