ಡೈಲಿ ವಾರ್ತೆ: 14/NOV/2025

ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರ ಸಾವು

ಭಟ್ಕಳ: ಮೀನುಗಾರನೋರ್ವ ಮೀನುಗಾರಿಗೆ ಸಂದರ್ಭದಲ್ಲಿ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಭಟ್ಕಳದ ಮಾವಿನಕುರ್ವೆ ಬಂದರ್ ಬಳಿ ಗುರುವಾರ ಸಂಭವಿಸಿದೆ.

ಮೃತರನ್ನು ಶ್ರೀಧರ್ ಪರಮೇಶ್ವರ್ ಖಾರ್ವಿ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಅವರು ಮೀನುಗಾರಿಕೆಗಾಗಿ ಮಾವಿನಕುರ್ವೆ ಬಂದರ್ ನಿಂದ ಸುಮಾರು 15 ಕಿ.ಮೀ ಸಮುದ್ರಕ್ಕೆ ಹೋಗಿದ್ದರು, ಆದರೆ ಮೀನುಗಾರಿಕಾ ಬಲೆಗಳನ್ನು ಎಳೆಯುವಾಗ ಆಯತಪ್ಪಿ ನೀರಿಗೆ ಬಿದ್ದರು.

ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.