



ಡೈಲಿ ವಾರ್ತೆ: 14/NOV/2025

170 ಕ್ಷೇತ್ರಗಳಲ್ಲಿ NDA ಗೆ ಮುನ್ನಡೆ – ಕೆಲ ಕ್ಷೇತ್ರಗಳಲ್ಲಿ ಬಿಜೆಪಿ, ಕೆಲ ಕ್ಷೇತ್ರಗಳಲ್ಲಿ ಜೆಡಿಯು ಪ್ರಬಲ!

ಪಾಟ್ನಾ: ಬಿಹಾರದಲ್ಲಿ 243 ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಸಮೀಕ್ಷೆಗಳು ಈಗಾಗಲೇ ಎನ್‌ಡಿಎ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ತೋರಿಸಿವೆ. ಇನ್ನೂ ಮತ ಎಣಿಕೆಯಲ್ಲಿ ಎನ್‌ಡಿಎ ಬೆಳಗ್ಗೆ 10:20 ಗಂಟೆ ಟ್ರೆಂಡ್ ವೇಳೆಗೆ ಮ್ಯಾಜಿಕ್ ನಂಬರ್ ಗಡಿ ದಾಟಿದ್ದು, 170 ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಸಿಎಂ ನಿತೀಶ್ ಕುಮಾರ್ ಫಲಿತಾಂಶಕ್ಕೂ ಮುನ್ನವೇ ವಿಜಯ ಘೋಷಿಸಿದ್ದಾರೆ.
ವಿಶೇಷವೆಂದ್ರೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ರೆ, ಕೆಲ ಕ್ಷೇತ್ರಗಳಲ್ಲಿ ಆರ್‌ಜೆಡಿ ಅಭ್ಯರ್ಥಿಗಳು ಪ್ರಬಲವಾಗಿದ್ದು, ಮಹಾಘಟಬಂಧನ್ ಅಭ್ಯರ್ಥಿಗಳ ಕಟ್ಟಿಹಾಕುವಲ್ಲಿ ಪ್ರಭಾವ ಬೀರಿದ್ದಾರೆ.