ಡೈಲಿ ವಾರ್ತೆ: 18/NOV/2025

ಕುಂದಾಪುರ| ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಗೆ ಸಹೋದರ ಮತ್ತು ಆತನ ಮಕ್ಕಳಿಂದ ಮಾರಕ ಹಲ್ಲೆ, ದೂರು ದಾಖಲು

ಕುಂದಾಪುರ: ದಾರಿಯಲ್ಲಿ ಕಸ ಹಾಕಿದ ವಿಚಾರದಲ್ಲಿ ವ್ಯಕ್ತಿ ಯೋರ್ವರ ಮೇಲೆ ಆತನ ಸಹೋದರ ಹಾಗೂ ಸಹೋದರನ ಮಕ್ಕಳು ಸೇರಿದಂತೆ ಮೂವರು ಬಂದು‌ ಅಂಗಡಿಯಲ್ಲಿ ಹಲ್ಲೆ ನಡೆಸಿದ ಘಟನೆ ಕುಂದಾಪುರದ ಖಾರ್ವಿಕೇರಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಅಣ್ಣಯ್ಯ ಪೊಂಡೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆರೋಪಿಗಳಾದ ಅಣ್ಣಯ್ಯ ಪೊಂಡೆಯ ಹಿರಿಯ ಸಹೋದರ ಅಮೃತ ಪೊಂಡೆ, ಆತನ ಮಗ ರಿತೇಶ್ ಪೊಂಡೆ, ಹಾಗೂ ಇನ್ನೊರ್ವ ಸಹೋದರನ ಮಗ ನವೀನ್ ಪೊಂಡೆ ಎಂಬವರ ಮೇಲೆ ಗಾಯಾಳುವಿನ ಪತ್ನಿ ಸಹನಾ ಪೊಂಡೆ ಕುಂದಾಪುರ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ ಖಾರ್ವಿಕೇರಿಯಲ್ಲಿ ಅಂಗಡಿ ನಡೆಸುತ್ತಿರುವ ಇವರ ಗಂಡ ಅಣ್ಣಯ್ಯ ಪೊಂಡೆಯವರು 17/11/2025 ರಂದು ಸಂಜೆ 6:15 ಗಂಟೆಗೆ ಅಂಗಡಿಯಲ್ಲಿರುವಾಗ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ಕಸ ಹಾಕಿದ ವಿಚಾರದಲ್ಲಿ ಏಕಾಎಕಿ ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು ಆಗ ಬಿಡಿಸಲು ಹೋದ ತನ್ನ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿ, ಆರೋಪಿ ರಿತೇಶನು ಕೆಂಪು ಕಲ್ಲು ತುಂಡಿನಿಂದ ತಲೆಗೆ ಹೊಡೆದು ಗಾಯವುಂಟುಮಾಡಿದ್ದು ಈ ಬಗ್ಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ದೂರು ದಾಖಲಿಸಿದ್ದಾರೆ. ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2025 ಕಲಂ:329(4), 115(2),118(1), 352, 351(2) R/W 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.