ಡೈಲಿ ವಾರ್ತೆ: 18/NOV/2025

ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ವಂಚನೆ ಪ್ರಕರಣ! ಆರೋಪಿ ಮ್ಯಾನೇಜರ್ ಸುರೇಶ್‌ ಭಟ್‌ ಬಂಧನ

ಉಡುಪಿ: ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಜಾನುವಾರುಕಟ್ಟೆಯ ಮ್ಯಾನೇಜರ್‌ ಸುರೇಶ್‌ ಭಟ್‌ ಅವರನ್ನು ಬಂಧಿಸಲಾಗಿದೆ.

ಕಿರಿಯ ಗುಮಾಸ್ತನಾದ 2ನೇ ಆರೋಪಿ ಹರೀಶ್‌ ಕುಲಾಲ್‌ ಹಾಗೂ ಮ್ಯಾನೇಜರ್ ಸೇರಿ ಸಂಘಕ್ಕೆ 1 ಕೋಟಿ 70 ಲಕ್ಷ ಹಣ ವಂಚಿಸಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ 2ನೇ ಆರೋಪಿ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ತಲೆಮರೆಸಿಕೊಂಡಿದ್ದಾರೆ.

ಪೊಲೀಸ್‌ ಉಪಾಧೀಕ್ಷಕರಾದ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟಾ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್. ಪಿ.ಎಸ್.ಐ. ( ಕಾ.&ಸು.) ಮಾಂತೇಶ್ ಜಾಭ ಗೌಡ, ಪಿ.ಎಸ್.ಐ. ( ತನಿಖೆ ) ಹಾಗೂ ಠಾಣಾ ಸಿಬ್ಬಂದಿಗಳಾದ ಸಿಹೆಚ್‌‌ಸಿ ಕೃಷ್ಣಶೇರೆಗಾರ, ಸಿಹೆಚ್‌‌ಸಿ ಶ್ರೀಧರ್, ಪಿಸಿ ವಿಜಯೇಂದ್ರ ಇವರುಗಳು ತಂಡ ದಸ್ತಗಿರಿ ಗೊಳಿಸಿರುತ್ತಾರೆ.