
ಡೈಲಿ ವಾರ್ತೆ: 03/DEC/2025
ಡಾ. ವಾಸುದೇವ ಅವರಿಗೆ ಅಂತರರಾಷ್ಟ್ರೀಯ ಎಕ್ಸಲೆನ್ಸ್ ಎಡಿಟರ್ ಅವಾರ್ಡ್

ಬೆಂಗಳೂರು : ಪ್ರಾದೇಶಿಕ ಪತ್ರಿಕೋದ್ಯಮದ ಶ್ರೇಷ್ಠತೆಗೆ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ವಿಸ್ಮಯವಾಣಿ ಸಂಪಾದಕ ಡಾ. ವಾಸುದೇವ ಅವರಿಗೆ ಅಂತರರಾಷ್ಟ್ರೀಯ ‘ಎಕ್ಸಲೆನ್ಸ್ ಎಡಿಟರ್ ಅವಾರ್ಡ್’ ಗೌರವ ದೊರೆತಿದೆ.
ಹೊಸೂರಿನ ಟಿಜಿಐ ಗ್ರ‍್ಯಾಂಡ್ ಫ್ರಾಚೂನ್ ಹೋಟೆನಲ್ಲಿ ಅಮೇರಿಕನ್ ವಿಸಡಂ ಪೀಸ್ ಯೂನಿವರ್ಸಿಟಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಪ್ರಭಾವಿ ತೀರ್ಪುಗಾರ ಮಂಡಳಿಯನ್ನು ಹೊಂದಿರುವ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ಅಕಾಡೆಮಿ, ಪ್ರಾದೇಶಿಕ ಪತ್ರಿಕಾ ಕ್ಷೇತ್ರದಲ್ಲಿ ನೀಡಿದ ಅಸಾಧಾರಣ ಸೇವೆಯನ್ನು ಪರಿಗಣಿಸಿ ಈ ವರ್ಷದ ‘ಎಕ್ಸಲೆನ್ಸ್ ಎಡಿಟರ್ ಅವಾರ್ಡ್’ ಅನ್ನು ಘೋಷಿಸಿದೆ.
ದಾವಣಗೆರೆ ಮೂಲದ ಪ್ರಾದೇಶಿಕ ಪತ್ರಕರ್ತ ಹಾಗೂ ವಿಸ್ಮಯವಾಣಿ ದಿನಪತ್ರಿಕೆಯ ಸಂಪಾದಕ ಡಾ. ವಾಸುದೇವ ದಾವಣಗೆರೆ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.
ಇದು ಏಷ್ಯಾದ ಹಲವು ದೇಶಗಳಿಂದ ನಾಮನಿರ್ದೇಶನಗೊಂಡ ಸಂಪಾದಕರ ಪೈಕಿ ಆಯ್ಕೆಯಾಗುವ ಅಪರೂಪದ ಗೌರವವಾಗಿದ್ದು, ಕನ್ನಡ ಮಾಧ್ಯಮದ ವಿಶೇಷ ಸಾಧನೆಯಾಗಿ ಗುರುತಿಸಲಾಗಿದೆ.
ಸುಮಾರು 28 ವರ್ಷಗಳ ಪತ್ರಿಕೋದ್ಯಮ ಪಯಣವನ್ನು ಹೊಂದಿರುವ ಡಾ. ವಾಸುದೇವವರು, ಪ್ರಾರಂಭದಲ್ಲಿ ವರದಿಗಾರರಾಗಿ ಕೆಲಸಮಾಡಿ, ಪ್ರಾದೇಶಿಕ ಮಟ್ಟದ ಅನೇಕ ಪತ್ರಿಕೆಗಳಲ್ಲಿ ತಾವು ರಚಿಸಿದ ನೈಜ ವರದಿಗಳ ಮೂಲಕ ಜನರನ್ನು, ಅಧಿಕಾರಿಗಳನ್ನು, ಮತ್ತು ನೀತಿ ರಚನೆಗಾರರನ್ನು ತಲುಪಿದರು.
ಪ್ರಶಸ್ತಿ ಘೋಷಣೆಯ ನಂತರ ಮಾತನಾಡಿದ ಡಾ. ವಾಸುದೇವ ದಾವಣಗೆರೆ ಅವರು, ಈ ಗೌರವ ವಿಸ್ಮಯವಾಣಿ ನಂಬಿಕೊAಡಿರುವ ಲಕ್ಷಾಂತರ ಓದುಗರಿಗೂ, ನಮ್ಮ ವರದಿಗಾರರಿಗೂ, ಶ್ರಮಿಸುತ್ತಿರುವ ನಮ್ಮ ಪುಟ್ಟ ತಂಡಕ್ಕೂ ಸಿಗುವ ಮಾನ್ಯತೆ. ಪತ್ರಿಕೋದ್ಯಮ ನನ್ನ ಉದ್ಯೋಗವಲ್ಲ ಅದು ನನ್ನ ಜೀವನದ ಉದ್ದೇಶ ಎಂದರು