
ಡೈಲಿ ವಾರ್ತೆ: 04/DEC/2025
5ನೇ ವರ್ಷದ ಡಿವಿನಿಟಿ ಕರ್ನಾಟಕ ರಾಜ್ಯೋತ್ಸವ-2025

ಬೆಂಗಳೂರು: ಸತ್ವ ಡಿವಿನಿಟಿ ಅಪಾರ್ಟ್ಮೆಂಟ್ ಮೈಸೂರ್ ರೋಡ್ ಬೆಂಗಳೂರು 5 ನೇ ವರ್ಷದ ಡಿವಿನಿಟಿ ಕರ್ನಾಟಕ ರಾಜ್ಯೋತ್ಸವ 2025 ಕಾರ್ಯಕ್ರಮವು ನವಂಬರ್ 29 ಶನಿವಾರ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಿತ್ರನಟಿ ಶ್ರೀಮತಿ ಅದಿತಿ ಪ್ರಭುದೇವ್ ಮತ್ತು ಸಂಗೀತಗಾರ ಹಾಗೂ ಸಯೋಜಕರಾದ ಶ್ರೀಯುತ ನವೀನ್ ಸಜ್ಜು ಅವರು ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಸತ್ವ ಡಿವಿನಿಟಿ ಕರ್ನಾಟಕ ರಾಜ್ಯೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾದ ಕಿರಣ್ ಜಯರಾಮ್ ಹಾಗೂ ಸದಸ್ಯರಾದಂತಹ ರಂಜಿತ್ ಶೆಟ್ಟಿ, ಕಿಶೋರ್ ಕುಮಾರ್, ಎಸ್.ಆರ್ ಪ್ರಭು, ಸತೀಶ್ ಶೆಟ್ಟಿ ಹಾಗೂ ಸುಬ್ರಮಣ್ಯ ಇವರ ಸಹಕಾರ ಹಾಗೂ ನೇತೃತ್ವದಲ್ಲಿ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.