
ಅಕ್ರಮ ಮರಳುಗಾರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ಎಚ್ಚರಿಕೆ!

ಉಡುಪಿ ಜಿಲ್ಲೆಯ ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ವ್ಯಾಪ್ತಿಯಲ್ಲಿ KRDCL ಹಾಗೂ ವಿವಿಧ ಇಲಾಖೆಗಳ ಮೂಲಕ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತೀವ್ರವಾಗಿ ಗಮನ ಸೆಳೆಯುತ್ತಿದೆ. ಕಳೆದ 2 ವರ್ಷಗಳಿಂದ ಯಾವುದೇ ಕೆಲಸ ಕಾರ್ಯ ನಡೆಯದಿರುವ KRDCL ಶಾಖೆಗಳನ್ನು ಬಳಸಿಕೊಂಡು, ದಿನಕ್ಕೊಂದು ನೂರಾರು ಲೋಡ್ಗಳಷ್ಟು ಮರಳಿಗೆ ಟ್ರೀಪ್ ಶೀಟ್‌ಗಳನ್ನು ಅಕ್ರಮವಾಗಿ ನೀಡಲಾಗುತ್ತಿದೆ.
ಈ ಬಗ್ಗೆ ಕೋಟ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರ ಗಣೇಶ್ ಶೆಟ್ಟಿ ಅವರು ಜಿಲ್ಲಾ ಇಲಾಖೆಗೂ, ಭೂಮಾಪನಾ ಅಧಿಕಾರಿಗೂ ದೂರು ಸಲ್ಲಿಸಿದ್ದಾರೆ. ಸರ್ಕಾರದ ಘೋಷಣೆಯಂತೆ ಬಡವರಿಗೆ ಸಬ್ಸಿಡಿ ದರದಲ್ಲಿ 3 ಯೂನಿಟ್ ಮರಳು ಲಭ್ಯವಾಗಬೇಕಾದರೆ, ಇದೀಗ 15,000 ರೂಪಾಯಿಗೆ ಮರಳು ಮಾರಾಟವಾಗುತ್ತಿದೆ.
ಅಧಿಕಾರಿಗಳ ಅಲಕ್ಷ್ಯದಿಂದಾಗಿ ನಾಗರಮಠ ಹಾಗೂ ಕಾವಡಿ ಪ್ರದೇಶದಲ್ಲಿ ಸಾರ್ವಜನಿಕರ, ರೈತರ ವಿರೋಧವಿದ್ದರೂ ಮರಳು ಪರವಾನಿಗೆ ನೀಡಲು ಶಾಸನಾತ್ಮಕವಾಗಿ ವಿಫಲ ಯತ್ನಗಳು ನಡೆಯುತ್ತಿವೆ.
ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಯುವ ಕಾಂಗ್ರೆಸ್ ಕಾನೂನು ಹೋರಾಟ ಮತ್ತು ಸಾರ್ವಜನಿಕ ಪ್ರತಿಭಟನೆ ನಡೆಸಲು ಬದ್ಧವಾಗಿದೆ ಎಂದು ಕೋಟ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ್ ಶೆಟ್ಟಿ
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.