ಡೈಲಿ ವಾರ್ತೆ:JAN/03/2026

ಸ.ಹಿ.ಪ್ರಾ. ಶಾಲೆ ಹೆಮ್ಮಾಡಿಯಲ್ಲಿ ಮೂರು ದಿನಗಳ ಶಿಬಿರ ಯಶಸ್ವಿ

ಕುಂದಾಪುರ| ಸ. ಹಿ. ಪ್ರಾ. ಶಾಲೆ ಹೆಮ್ಮಾಡಿಯಲ್ಲಿ ಡಿ.31ರಿಂದ ಜ.2 ರ ವರೆಗೆ “ಸುಬ್ಬಣ್ಣ ಸಂಘಟನಾ ರಂಗ ಕಮ್ಮಟ” ಸಹಯೋಗದೊಂದಿಗೆ ಪೋಷಕರು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮೂರು ದಿನಗಳ ಶಿಬಿರ ನಡೆಯಿತು.
ರಾಷ್ಟ್ರ ಮಟ್ಟದ ಕಲಾವಿದರಾದ ಶ್ರೀಯುತ ಪ್ರಸನ್ನ ಹುಣಸೆ ಕೊಪ್ಪ, ಶ್ರೀಯುತ ಶ್ರೀಪಾದ್ ಭಾಗವತ್, ಶ್ರೀಯುತ ಕೃಷ್ಣಕುಮಾರ್ ಖಂಡಿಕ, ಹಾಗು ಸಂಪದರವರು ನಡೆಸಿ ಕೊಟ್ಟರು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀಯುತ ನಾಗೇಶ್ ನಾಯಕ್, ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಜಯಲಕ್ಷ್ಮಿ ಎಸ್ ಕೆ ಹಾಗು ಎಸ್ ಡಿ ಎಮ್ ಸಿ ಅಧ್ಯಕ್ಷರು, ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಯವರು ಮೆಚ್ಚುಗೆ ಮಾತುಗಳ ನಾಡಿದರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನ ಮಾಡಿದರು
ಸಂಪನ್ಮೂಲ ವ್ಯಕ್ತಿಗಳ ಸಂಪೂರ್ಣ ವೇತನ ಭತ್ಯೆ ಯನ್ನು ಚಂದ್ರ ಶೆಟ್ಟಿ ಬಿದ್ಕಲ್ ಕಟ್ಟೆ ಇವರು ವಹಿಸಿಕೊಂಡಿರುತ್ತಾರೆ.ಹಾಗು ಊಟ – ಉಪಹಾರ ವ್ಯವಸ್ಥೆ ಯನ್ನು ಅಶೋಕ ಭಟ್ ಹೆಮ್ಮಾಡಿ, ಹರೀಶ್ ಹೆಮ್ಮಾಡಿ ಇವರು ಮಾಡಿರುತ್ತಾರೆ. ಹಸಿರು ನರ್ಸರಿ ಯಿಂದ ಸಂಪನ್ಮೂಲ ವ್ಯಕ್ತಿ ಗಳಿಗೆ ಹೆಮ್ಮಾಡಿಯ ನೆನಪಾಗಿ ಹಣ್ಣಿನ ಗಿಡಗಳನ್ನು ನೀಡಿರುತ್ತಾರೆ. ಈ ಕಾರ್ಯಕ್ರಮ ದ ವಿಶೇಷತೆ ಎಂದರೆ ಕರ್ನಾಟಕ ದಲ್ಲೇ ಮೊದಲ ಬಾರಿಗೆ ಆಯೋಜನೆ ಗೊಂಡ ವಿನೂತನ ಕಾರ್ಯಕ್ರಮ ಎನ್ನುವುದು ಹೆಮ್ಮಾಡಿಯ ಹೆಮ್ಮೆ.