ಡೈಲಿ ವಾರ್ತೆ:JAN/10/2026

ಭಾಲ್ಕಿ| ಡಾವರಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಅತೀ ಕ್ರಮಣ – ಕಣ್ಮುಚ್ಚಿ ಕುಳಿತ ಸ್ಥಳೀಯಾಡಳಿತ, ಗ್ರಾಮಸ್ಥರಿಂದ ತೆರವುಗೆ ಮನವಿ, ಪ್ರತಿಭಟನೆ ಎಚ್ಚರಿಕೆ

ಬೀದರ್: ಭಾಲ್ಕಿ ತಾಲೂಕಿನ ಡಾವರಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮಾಸಿಮಾಡು ಗ್ರಾಮದಲ್ಲಿನ 1965-1966 ಮಂಡಲ ಪಂಚಾಯತಕ್ಕಿಂತ ಮೊದಲಿನ ಸರ್ವೆ ನಂ. 1// ರಲ್ಲಿನ 22-ಗುಂಟೆ (ಗ್ರಾಮಪಂಚಾಯಿತಾ ಮಾಸಿಮೋಡ) ಎಂದು ಪಾಹಣಿಯಲ್ಲಿ ನಮೂದಾಗಿರುವ ಹಳೆಯ ಪಂಚಾಯತ ಕಟ್ಟಡ ನಿರ್ಮಾಣ ಇಂದಿಗೂ ಹಾಗೆ ಉಳಿದುಕೊಂಡಿರುತ್ತದೆ.

ಏಕೆಂದರೆ ಸದರಿ ಸರ್ವೆ ನಂಬರಿನ ಪಂಚಾಯತಿಯ ಪಾಹಣಿಯಲ್ಲಿ ನಮೂದಾಗಿರುವ ಇದನ್ನು ಸರ್ಕಾರಿ ಜಾಗವೆಂದು ಇದ್ದರು ಸಹ ಇದರ ನಾವುಗಳು ಈ ಹಿಂದೆ ಕೂಡಾ ಗ್ರಾಮ ಪಂಚಾಯತಿಗೆ ಸುಮಾರು ಎಷ್ಟೋ ಸಲಾ ಅಂದರೆ 2023 ರಿಂದ 2025 ರ ವರೆಗೆ ಇಲ್ಲಿಯವರೆಗೆ ಸದ್ಯ, ಜಾಗದಲ್ಲಿ ಅತೀ ಕ್ರಮ ಮಾಡಿರುವ ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅರ್ಜಿಗಳು ಸಲ್ಲಿಸಿದರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು, ಸದಸ್ಯರುಗಳು ತಮ್ಮ ಗಮನಕ್ಕೆ ತೆಗೆದುಕೊಳ್ಳಲಾರದೆ. ಇಲ್ಲಿಯವರೆ ಯಾವುದ ರೀತಿಯ ಕ್ರಮ ಕೈಗೊಂಡಿರುವುದಿಲ್ಲ, ಇದೇ ರೀತಿಯಾಗಿ ನಾವುಗಳು ಸತ್ಯಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದರು ಸಹ ಪಂಚಾಯತಿಯಲ್ಲಿನ ಅಧಿಕಾರಿಗಳು ನಿಷ್ಕಾಳಜಿ ಮಾಡಿ ಕಾಲಾಪಹರಣ ಮಾಡಿರುತ್ತಾರೆ.

ಏಕೆಂದರೆ ಇವಾಗ ಸಧ್ಯದಲ್ಲಿ ಸದರಿ ಸರ್ವೆ ನಂಬರಿನ ಜಾಗದಲ್ಲಿ ಭಾಲ್ಕಿಯಿಂದ ಹಳ್ಳಿಖೇಡ ರಸ್ತೆಯ ಕೂಡಾ ಇರುತ್ತದೆ, ಅಲ್ಲಿನ ಸ್ಥಿತಿಯನ್ನು ಸಾರ್ವಜನಿಕರು ಕುಂದುಕೊರತೆಗಳ ಸಮಸ್ಯೆಯಿಂದ ಬಳುತ್ತಿರುವ ನಮ್ಮ ಮಾಸಿಮಾಡು ಗ್ರಾಮದಲ್ಲಿ ಬಸ್ ನಿಲ್ದಾಣ, ಅಂಗವಾಡಿ ಕೇಂದ್ರ, ಗ್ರಂಥಾಲಯ ಇವರುಗಳು ಯಾವುದೆ ಇರುವುದಿಲ್ಲ. ಈ ಸ್ಥಳದಲ್ಲಿ ನಮ್ಮ ಗ್ರಾಮದ ಸುತ್ತ/ಮುತ್ತಲಿನ ಗ್ರಾಮಗಳಾದ, ಗೋಧಿಹಿಪ್ಪಾರ್ಗಾ, ನೇಲವಾಡ, ಕಳ್ಳಿವಾಡಿ, ಗ್ರಾಮಗಳ ವಿದ್ಯಾರ್ಥಿಗಳು ಈ ಸ್ಥಳದ ಬರುತ್ತಿರುತ್ತಾರೆ. ಈ ಸ್ಥಳದ ಸಾರ್ವಜನಿಕರಿಗೆ ಕುತುಕೊಳ್ಳುವದಕ್ಕೆ ಆಸಾನ ಇರುವುದಿಲ್ಲ ಅಥವಾ ಬಸ್ ನಿಲ್ದಾಣ ಇಲ್ಲದೇ ಜನಗಳು ಈ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.

ಆದ್ದದರಿಂದ ದಯಾಳುಗಳಾದ ತಾವುಗಳು ನಮ್ಮ ಅರ್ಜಿಯನ್ನು ತಮ್ಮ ಗಮನಕ್ಕೆ ತೆಗೆದುಕೊಂಡು ನಮ್ಮ ಮಾಸಿಮಾಡು ಗ್ರಾಮದಲ್ಲಿನ ಪಂಚಾಯತ ಸರ್ಕಾರಿ ಜಾಗದಲ್ಲಿ ಅತೀ ಕ್ರಮ ಮಾಡಿರುವ ಇವರನ್ನು ತೆರೆವುಗೊಳಿಸಿ ಇವರ ವಿರುದ್ಧವಾಗಿ ಸೂಕ್ತ ಕಾನೂನಿನ ಕ್ರಮ ಕೈಗೊಂಡು ಮಾಸಿಮಾಡು ಸಾರ್ವಜನಿಕರಿಗೆ ಅನುಕೂಲತೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.