


ಡೈಲಿ ವಾರ್ತೆ:JAN/10/2026


ಮಣಿಪಾಲ: ಸವಾರ ನಿಯಂತ್ರಣ ತಪ್ಪಿ ಬೈಕ್ ಪಲ್ಟಿ – ಯುವಕ ಸ್ಥಳದಲ್ಲೇ ಮೃತ್ಯು

ಮಣಿಪಾಲ: ಉಡುಪಿಯಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದಾಗ ಲಕ್ಷ್ಮೀಂದ್ರನಗರದ ಸುಧಾ ಫರ್ನಿಚರ್ ಬಳಿ ಬೈಕ್ ಸ್ಕಿಡ್ ಆಗಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ ಸಂಭವಿಸಿದೆ.
ಇಂದಿರಾನಗರದ ಬುಡ್ನಾರ್ ನಿವಾಸಿ ಪ್ರವೀಣ್ ಶೆಟ್ಟಿ (36) ಮೃತ ದುರ್ದೈವಿ.
ರಿಯಲ್ ಎಸ್ಟೇಟ್ ಸಹಿತ ಹಲವು ಉದ್ಯಮದಲ್ಲಿ ತೊಡಗಿಕೊಂಡಿದ್ದ ಪ್ರವೀಣ್ ಕಳೆದ ಒಂದವರೇ ವರ್ಷದ ಹಿಂದೆಯಷ್ಟೇ ಯುವತಿಯೋರ್ವಳನ್ನು ಪ್ರೀತಿಸಿ ಮದುವೆ ಆಗಿದ್ದರು.
ಮಣಿಪಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.