ಡೈಲಿ ವಾರ್ತೆ:JAN/15/2026

ವಂಡಾರು| ಶ್ರೀ ಕೃಷ್ಣಪ್ರಸಾದ್ ಆಗೋ ಪ್ರೈವೈಟ್ ಲಿಮಿಟೆಡ್ ಇದರ ನೂತನ ಶಾಖೆ ಲೋಕಾರ್ಪಣೆ

ಕೋಟ: ಶ್ರೀ ಕೃಷ್ಣಪ್ರಸಾದ್ ಆಗೋ ಪ್ರೈವೈಟ್ ಲಿಮಿಟೆಡ್ ಇದರ ನೂತನ ಶಾಖೆ ಜ. 15 ರಂದು ಗುರುವಾರ ವಂಡಾರಿನ ಬೋರ್ಡಕಲ್ ಎಂಬಲ್ಲಿ ಶುಭಾರಂಭಗೊಂಡಿತ್ತು.

ಇದರ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಉದ್ಘಾಟಿಸಿ ಅವರು ಮಾತನಾಡಿ ದೇಶದ 25% ಗೇರು ಉತ್ಪಾದನೆ ಕರ್ನಾಟಕದಲ್ಲಿ ನಡೆಯುತ್ತಿದೆ. ಗೇರು ತಳಿಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಗೇರು ಕೃಷಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತೇಜನ ನೀಡಬೇಕು. ಕೇವಲ ನಿಗಮಗಳ ಮೂಲಕ ಕೆಂಪು ಗೂಟದ ಕಾರುಗಳಿಗೆ ಮೀಸಲಾಗದೇ ಗೇರು ಕೃಷಿಯನ್ನು ಕೃಷಿ ವ್ಯಾಪ್ತಿಗೆ ಒಳಪಡಿಸಿ, ಗೇರು ಬೀಜ, ಗೇರು ಎಣ್ಣೆ, ಗೇರು ಹಣ್ಣುಗಳ ಸದ್ಬಳಕೆ ಮಾಡಲು ಸಂಶೋಧನೆಗೊಳಪಡಿಸಬೇಕು ಎಂದು ಡಾ. ಮೋಹನ್ ಆಳ್ವಾ ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗೇರು ಉದ್ಯಮದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸರ್ಕಾರದ ಆರೋಗ್ಯ ವಿಮೆಯಲ್ಲಿ ಸರ್ಕಾರ ಪಾಲುದಾರಿಕೆ ನೀಡಬೇಕು ಎಂದು ಆಗ್ರಹಿಸಿದರು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರಾಜ್ಯದಲ್ಲಿಯೆ ಅತೀ ಹೆಚ್ಚು ಉದ್ಯಮಗಳು ನಡೆಯುತ್ತಿರವುದು ಹೆಮ್ಮೆ. ಗೇರು ಉದ್ಯಮವಂತೂ ತಂತಿ ಮೇಲಿನ ನಡಿಗೆ ಇದ್ದಂತೆ
ಸ್ವಲ್ಪ ಯಾಮಾರಿದರೂ ಮೇಲೇಳುವುದು ಕಷ್ಟ. ಅಂತಹಾ ಗೇರು ಉದ್ಯಮದ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ.ಸುಕುಮಾ‌ರ್ ಶೆಟ್ಟಿ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೂಡುಗಿಳಿಯಾ‌ರು ಜನಸೇವಾ ಚಾರಿಟೇಬಲ್ ಟ್ರಸ್ಟ್‌ ನ ಅಧ್ಯಕ್ಷ ವಸಂತ ಗಿಳಿಯಾರ್ ಶುಭ ಹಾರೈಸಿದರು.

ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಚೇರ್ಮೇನ್ ಸಂಪತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಸಿದರು.
ಸಂಸ್ಥೆಯ ಜನರಲ್ ಮ್ಯಾನೇಜ‌ರ್ ಶ್ರೀನಿವಾಸ್‌ ಅಭಿಪ್ರಾಯ ಮಂಡಿಸಿದರು.

ಇದೇ ಸಂದರ್ಭ ಪ್ಲಾಂಟ್ ಇಲೆಕ್ಟಿಕಲ್ ಇನ್ಚರ್ಜ್ ಅನ್ವೇಶ್ ಹಾಗೂ ಕೃಷ್ಣಪ್ರಸಾದ್ ಸ್ಟೀಲ್ಸ್ ನ ಜನರಲ್ ಮ್ಯಾನೇಜರ್ ಶ್ರೀನಿವಾಸ್‌ ಶೆಟ್ಟಿ ಇವರಿಗೆ ಸ್ವಿಪ್ಟ್ ಕಾರು, ಕೃಷ್ಣಪ್ರಸಾದ್ ಅಗೋ ಇಂಡಸ್ಟ್ರೀಸ್ ನ ಸೇಲ್ಸ್ ಮ್ಯಾನೇಜ‌ರ್ ಮೈಕೆಲ್ ರೋಷನ್ ಅವರಿಗೆ ಬೋಲೆನೋ ಕಾರು ಹಾಗೂ ಕೃಷ್ಣಪ್ರಸಾದ್ ಕ್ಯಾಶೂಸ್ ನ ಪರ್ಚೇಸ್ ಹೆಡ್ ಚೈತ್ರಾ ಹಾಗೂ ಪ್ರೊಡಕ್ಷನ್ ಮ್ಯಾನೇಜ‌ರ್ ಆಶಾ ಇಬ್ಬರಿಗೆ ಮೂರು ಲಕ್ಷ ರೂ ಮೌಲ್ಯದ ಚಿನ್ನಾಭರಣ ಸೇರಿದಂತೆ ಐವರು ಸಿಬ್ಬಂದಿಗಳಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು.

ಉದ್ಯಮದ ಆರಂಭದಲ್ಲಿ ಮಾರ್ಗದರ್ಶನ ನೀಡಿದ ಶಶಿಧರ ಶೆಟ್ಟಿ, ಶಂಕರ ಶೆಟ್ಟಿ ಹಾಗೂ ನಾಗರಾಜ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಡಗುಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಕೃಷ್ಣ ಮೋಹನ್ ಮುಚ್ಚರ್ಲಾ, ಗ್ರಾಮ ಪಂಚಾಯತ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕರ್ನಾಟಕ ಗೋಡಂಬಿ ತಯಾರಿಕಾ ಸಂಘ ಅಧ್ಯಕ್ಷ ಎ ಕೆ ರಾವ್, ವಂಡಾರಿನ ಮೆಕ್ಕೆಕಟ್ಟು ದೇವಸ್ಥಾನದ ಅರ್ಚಕ ಸುಧೀ‌ರ್ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪತ್ರಕರ್ತ ಕೆ.ಸಿ ರಾಜೇಶ್ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ ಕೊಂಡಕುಳಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ದಕ್ಷಯಜ್ಞ” ಯಕ್ಷಗಾನ ನಡೆಯಿತು.