ಡೈಲಿ ವಾರ್ತೆ:JAN/19/2026

ಬ್ರಹ್ಮಾವರ| ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ಬ್ರಹ್ಮಾವರ: ಕಿರಣ್‌ ಪಿಂಟೋ (49) ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರವೀಣ್‌, ಸುಜಿತ್‌ ಡಿಸೋಜಾ ಮತ್ತು ಸುಷ್ಮಾಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಕಿರಣ್‌ ಪಿಂಟೋ ಅವರು ಆರೋಪಿಗಳ ಪರಿಚಯಸ್ಥರಾಗಿದ್ದು, ಆರೋಪಿ ಸುಜಿತ್‌ ಡಿಸೋಜಾ ಮತ್ತು ಸುಷ್ಮಾಗೌಡ ಇವರು ಕಿರಣ್‌ ಪಿಂಟೋರರ ಮನೆಗೆ ಬಂದು ಹೋಗುತ್ತಿದ್ದರು.

ದಿನಾಂಕ 18/01/2026 ರಂದು ಮದ್ಯಾಹ್ನ 3:40 ಗಂಟೆಗೆ ಪ್ರವೀಣ್‌ ರವರು ಕಿರಣ್‌ ಪಿಂಟೋರಿಗೆ ಪೋನ್‌ ಮಾಡಿ ಸುಷ್ಮಾ ಗೌಡ ನನ್ನನ್ನು ಬಿಟ್ಟು ಸುಜೀತನೊಂದಿಗೆ ಅನ್ಯೋನ್ಯವಾಗಿ ಇರುತ್ತಾಳೆ ಎಂದು ಹೇಳಿದ್ದು, ಇಲ್ಲದ ಸಲ್ಲದ ವಿಚಾರವನ್ನು ಪ್ರವೀಣನಲ್ಲಿ ಹೇಳಿರುತ್ತಿರ ಎಂದು ಕೇಳಿದ್ದು, ಅದಕ್ಕೆ ಕಿರಣ್‌ ಪಿಂಟೋರವರು ಇಲ್ಲವೆಂದು ಹೇಳಿ ತಾನು ಬ್ರಹ್ಮಾವರಕ್ಕೆ ಬಂದು ಕೊರಗಜ್ಜನ ಮುಂದೆ ಪ್ರಮಾಣ ಮಾಡುತ್ತೇನೆಂದು ಹೇಳಿ ಬ್ರಹ್ಮಾವದ ಚಾಂತಾರು ಗ್ರಾಮದ ಕುಬೇರ ಬಾರ್‌ ಬಳಿ ರಾತ್ರಿ 8:30 ಗಂಟೆಗೆ ಬಂದಿರುತ್ತಾರೆ.

ಸ್ಥಳಕ್ಕೆ ಕಾರಿನಲ್ಲಿ ಸುಜೀತ್‌ ಡಿಸೋಜಾ, ಸುಷ್ಮಾ ಗೌಡ ಹಾಗೂ ಅಶ್ವಿನಿ ನಾಯ್ಕ ಇವರು ಬಂದಿದ್ದು, ಸ್ಥಳದಲ್ಲಿ ಆರೋಪಿ ಪ್ರವೀಣ್‌ ಕೂಡ ಇದ್ದನು. ಕಿರಣ್‌ ಪಿಂಟೋರವರು ಪ್ರವೀಣ ಬಳಿ ಹೋಗಿ ಸುಷ್ಮಾ ಇವರಲ್ಲಿ ಪ್ರವೀಣನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಸುಜೀತ್‌ ಮತ್ತು ಸುಷ್ಮಾಗೌಡ ಕಿರಣ್‌ ಪಿಂಟೋರರ ಕೈ ಹಿಡಿದುಕೊಂಡಿದ್ದು, ಸ್ಥಳದಲ್ಲಿದ್ದ ಪ್ರವೀಣ ಕಾರಿನಿಂದ ಸ್ಟೀಲ್‌ ರಾಡ್‌ ತೆಗೆದು ಸ್ಟೀಲ್‌ ರಾಡ್‌ ನಿಂದ ಕಿರಣ್‌ ಪಿಂಟೋರವರ ಎಡ ಭುಜಕ್ಕೆ ಹೊಡೆದಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ: 15/2026 ಕಲಂ: 118(1)RW3(5)BNS ರಂತೆ ಪ್ರಕರಣ ದಾಖಲಾಗಿರುತ್ತದೆ.