ಡೈಲಿ ವಾರ್ತೆ:JAN/20/2026

ಕುಂದಾಪುರ: ಫ್ರೆಂಡ್ಸ್ ಟ್ರೋಫಿ–2026 ಕ್ರಿಕೆಟ್ ಪಂದ್ಯಾಟ – ಟೌನ್ ಎಚ್.ಎಂ.ಸಿ.ಗೆ ಚಾಂಪಿಯನ್ ಪಟ್ಟ

ಕುಂದಾಪುರ: ಪ್ರಥಮ ಬಾರಿಗೆ “ಫ್ರೆಂಡ್ಸ್ ಟ್ರೋಫಿ–2026” ಕ್ರಿಕೆಟ್ ಪಂದ್ಯಾಟವನ್ನು ಕುಂದಾಪುರದ ಗಾಂಧಿ ಮೈದಾನದಲ್ಲಿ ಮುಸ್ಲಿಂ ಸಮಾಜ ಬಾಂಧವರಿಗಾಗಿ ಆಯೋಜಿಸಲಾಗಿತ್ತು. ಎರಡು ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ 8 ಏರಿಯಾ ವೈಸ್ ಎಂಟು ಪ್ರಾಂಚೈಸಿ ತಂಡಗಳು ಭಾಗವಹಿಸಿದ್ದವು.

ಸ್ಪರ್ಧಾತ್ಮಕ ಪಂದ್ಯಾಟಗಳಲ್ಲಿ ಝಾರ್ ತಂಡವು ಸಮೀಫೈನಲ್‌ನಲ್ಲಿ ಸ್ವಪ್ನ ಟೌನ್ ಎಚ್.ಎಸ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿತು. ಏರಿಯಾ ವೈಸ್ ಪಂದ್ಯದಲ್ಲಿ ಜ್ವಾಲಿ ಮೂಡುಗೋಪಾಡಿ ತಂಡವನ್ನು ಸೋಲಿಸಿದ ಟೌನ್ ಎಚ್.ಎಂ.ಸಿ. ಫೈನಲ್ ಪ್ರವೇಶಿಸಿತು.


ರೋಚಕ ಫೈನಲ್ ಹಣಾಹಣಿಯಲ್ಲಿ ಅದೃಷ್ಟವಂತ ತಂಡದ ಮಾಲಕ ಮುನಾಪ್ ಹೆಮ್ಮಾಡಿ ಮಾಲಕತ್ವದ ಟೌನ್ ಎಚ್.ಎಂ.ಸಿ. ತಂಡವು ವಿಜಯಶಾಲಿಯಾಗಿ ಪ್ರಥಮ ಬಹುಮಾನವಾಗಿ ಆಕರ್ಷಕ ಟ್ರೋಫಿ ಸಹಿತ ರೂ. 75,075 ನಗದು ಬಹುಮಾನ ಪಡೆದುಕೊಂಡಿತು.
ದ್ವಿತೀಯ ಸ್ಥಾನವನ್ನು ಸ್ವಪ್ನ ಟೌನ್ ಎಚ್.ಎಸ್ ಪಡೆದುಕೊಂಡು ಆಕರ್ಷಕ ಟ್ರೋಫಿ ಹಾಗೂ ರೂ. 35,035 ನಗದು ಬಹುಮಾನ ಗಳಿಸಿತು.
ವೈಯಕ್ತಿಕ ಪ್ರಶಸ್ತಿಗಳಲ್ಲಿ ಉತ್ತಮ ಎಸೆತಗಾರನಾಗಿ ಸನಾದ್ ಹೊನ್ನಾಳ, ಉತ್ತಮ ದಾಂಡಿಗನಾಗಿ ಇರ್ಷಾದ್, ಉತ್ತಮ ಗೂಟ ರಕ್ಷಕನಾಗಿ ರಿಫಾಕ್ ಹಾಗೂ ಸರಣಿಶ್ರೇಷ್ಠ ಆಟಗಾರನಾಗಿ ಸನಾದ್ ಹೊನ್ನಾಳ ಆಯ್ಕೆಯಾದರು.
ಪಂದ್ಯಾಟಕ್ಕೆ ಕ್ರೀಡಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಯೋಜಕರ ಕಾರ್ಯವನ್ನು ಮೆಚ್ಚಲಾಯಿತು.