

ಡೈಲಿ ವಾರ್ತೆ:JAN/20/2026


ಸೂರಿಕುಮೇರು| ಬದ್ರಿಯಾ ಜುಮ್ಮಾ ಮಸೀದಿ ವಾರ್ಷಿಕ ಮಹಾಸಭೆ – ನೂತನ ಸಮಿತಿ ರಚನೆ, ಅಧ್ಯಕ್ಷರಾಗಿ ಉದ್ಯಮಿ ಎಸ್.ಎ. ಇಸ್ಮಾಯಿಲ್ ಆಯ್ಕೆ

ಮಾಣಿ: ಬದ್ರಿಯಾ ಜುಮ್ಮಾ ಮಸೀದಿ, ಸೂರಿಕುಮೇರು ಇದರ ವಾರ್ಷಿಕ ಮಹಾಸಭೆ ಶುಕ್ರವಾರ ಮಸೀದಿ ಮದ್ರಸಾ ಹಾಲ್‌ನಲ್ಲಿ ನಡೆಯಿತು.
ಸಭೆಗೆ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಅಮೀರುದ್ದೀನ್ ಹಾಗೂ ಜೊತೆ ಕಾರ್ಯದರ್ಶಿ ಕರೀಂ ನೆಲ್ಲಿ ಅವರು ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಮಸೀದಿ ಖತೀಬ್ ಹಸೈನಾರ್ ಸಅದಿ ಪೆರ್ಲ ಅವರು ದುಆ ನೆರವೇರಿಸಿದರು.
ಸಭೆಯ ಅನುಮೋದನೆ ಪಡೆದು ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ಎಸ್.ಎ. ಇಸ್ಮಾಯಿಲ್, ಉಪಾಧ್ಯಕ್ಷರಾಗಿ ಹಂಝ ಕಾಯರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಮೀರುದ್ದೀನ್, ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಆದರ್ಶ ಮಾಣಿ ಮತ್ತು ಮೂಸಾ ಕರೀಂ ಮಾಣಿ, ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ ಹಮೀದ್ ನೆಲ್ಲಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ, ಯೂಸುಫ್ ಹಾಜಿ ಸೂರಿಕುಮೇರು, ಅಝೀಂ ನೆಲ್ಲಿ, ಮುಹಮ್ಮದಾಲಿ ಮುಸ್ಲಿಯಾರ್, ಅಬ್ದುಲ್ ರಹ್ಮಾನ್ ಪುತ್ತು, ಬಶೀರ್ ಮಾಣಿ, ಅಬ್ದುಲ್ ಖಾದರ್ ಮಾಣಿ, ಇಬ್ರಾಹಿಂ ನೆಲ್ಲಿ, ಅಬ್ದುಲ್ ಲತೀಫ್ ಗುಡ್ಡೆ, ನಾಸೀರ್ (ಬದ್ರಿಯಾ ಗ್ರೌಂಡ್), ಸುಲೈಮಾನ್ ಕುಕ್ಕಿಲ ಅವರನ್ನು ಆಯ್ಕೆ ಮಾಡಲಾಯಿತು.