ಡೈಲಿ ವಾರ್ತೆ:JAN/22/2026

ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳ ಭರ್ಜರಿ ಸಾಧನೆ: 24ರಲ್ಲಿ 21 ಮಂದಿ ಉತ್ತೀರ್ಣ

ಕುಂದಾಪುರ: ಸಿಎ ಹಾಗೂ ಸಿಎಸ್‌ಇಇಟಿ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಕಳೆದ 14 ವರ್ಷಗಳಿಂದ ಗುಣಮಟ್ಟದ ತರಬೇತಿ ನೀಡುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ಐಸಿಎಸ್‌ಐ) ನಡೆಸಿದ ಸಿಎಸ್ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಪರೀಕ್ಷೆಗೆ ಹಾಜರಾದ 24 ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಜಯಸೂರ್ಯ (176), ಆಕಾಶ್ (173), ಅಂಶಿಕ್ (170), ನೇಹಾ (167), ಶೆಟ್ಟಿ ಶ್ರೇಯಸ್ (166), ಸ್ಪೂರ್ತಿ ಶೆಟ್ಟಿಗಾರ್ (164), ಆರ್ಯ (163), ಸುಮೀತ್ ಮರಾಠಿ (163), ನೀಶಾಲ್ (162), ಸಮೃದ್ದ್ ಶೆಟ್ಟಿ (161), ರಾಹುಲ್ ಪೂಜಾರಿ (160), ಶ್ರೇಯಸ್ ಟಿ (159), ರಶ್ವೀತ್ (156), ಪ್ರಥಮೇಶ್ ದೇವಾಡಿಗ (151), ನೀಶಾಂತ್ (151), ಆಯ್ಯಷ್ (146), ಚರಣ್ (140), ಸಂಚಿತ್ (136), ಯಶಸ್ವಿ ಪಿ. ಶೆಟ್ಟಿ (128), ಪ್ರಾಪ್ತಿ ಶೆಟ್ಟಿ (126) ಹಾಗೂ ಶ್ರೀಶ್ ಕುಮಾರ್ ಶೆಟ್ಟಿ (122) ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಎಂ. ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದಿಸಿ, ಮುಂದಿನ ಹಂತದ ಪರೀಕ್ಷೆಗಳಿಗೆ ಶುಭ ಹಾರೈಸಿದರು.

ವಿದ್ಯಾರ್ಥಿಗಳ ಸತತ ಪರಿಶ್ರಮ, ಸಂಸ್ಥೆಯ ಅನುಭವಯುತ ಮಾರ್ಗದರ್ಶನ ಹಾಗೂ ಶಿಸ್ತಿನ ತರಬೇತಿ ಈ ಯಶಸ್ಸಿಗೆ ಕಾರಣವಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.