
ಡೈಲಿ ವಾರ್ತೆ:JAN/26/2026
ಕುಂದಾಪುರದ ‘ಆಭರಣ’ ಮಳಿಗೆಯಲ್ಲಿ ಪುರಸಭಾ ನೌಕರರಿಗೆ ಗೌರವ ಸನ್ಮಾನ

ಕುಂದಾಪುರ, ಜ.26: 77ನೇ ಗಣರಾಜ್ಯೋತ್ಸವದ ಅಂಗವಾಗಿ ಕುಂದಾಪುರದಲ್ಲಿರುವ “ಆಭರಣ” ಮಳಿಗೆಯ ಕುಂದಾಪುರ ಶಾಖೆಯಲ್ಲಿ ಕುಂದಾಪುರ ಪುರಸಭೆಯ 12 ಮಂದಿ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರದ ಸ್ವಚ್ಛತೆ, ಸಾರ್ವಜನಿಕ ಸೇವೆ ಹಾಗೂ ಪುರಸಭಾ ಆಡಳಿತದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಪುರಸಭಾ ನೌಕರರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸನ್ಮಾನ ಸ್ವೀಕರಿಸಿದ ನೌಕರರನ್ನು ಸಂಘಟಕರು ಅಭಿನಂದಿಸಿ, ಅವರ ಸೇವಾಭಾವನೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟಕರು, ಗಣರಾಜ್ಯೋತ್ಸವದ ಅಂಗವಾಗಿ ಆಭರಣ ಮಳಿಗೆಯ ಎಲ್ಲಾ ಶಾಖೆಗಳಲ್ಲೂ ಈ ರೀತಿಯ ಸನ್ಮಾನ ಕಾರ್ಯಕ್ರಮವನ್ನು ಏಕಕಾಲದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಭರಣ ಮಳಿಗೆಯ ಪ್ರತಿನಿಧಿಗಳು, ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದು, ದೇಶ ಸೇವೆಗೆ ಶ್ರಮಿಸುತ್ತಿರುವ ನೌಕರರಿಗೆ ಗೌರವ ಸಲ್ಲಿಸುವ ಸಂದೇಶವನ್ನು ನೀಡಿದರು.
ರಂಗನಾಥ್ ಪೈ ಕಾರ್ಯಕ್ರಮ ನಿರೂಪಿಸಿ, ಗೌರವಿಸಿದರು. ರಮೇಶ್ ಮೇಲಾಡಿ ಹಾಗೂ ರಾಮಚಂದ್ರ ಪ್ರಭು ಸನ್ಮಾನಿಸಿದರು.